ಬಿಎಸ್‌ಎಫ್ ಅಧಿಕಾರಿ ಮತ್ತು ಪತ್ನಿಯನ್ನು ವಿದೇಶಿಯರೆಂದು ಘೋಷಿಸಿದ ನ್ಯಾಯಾಧಿಕರಣ !

Update: 2019-08-23 16:48 GMT
ಫೋಟೊ ಕೃಪೆ: thequint

ದಿಸ್ಪುರ್, ಆ. 23: ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಅವರ ಪತ್ನಿಯನ್ನು ಪೂರ್ವ ಅಸ್ಸಾಂನ ಜೊರ್ಹಾತ್ ಪಟ್ಟಣದಲ್ಲಿರುವ ವಿದೇಶಿಗರ ನ್ಯಾಯಾಧಿಕರಣ ‘ವಿದೇಶಿಗರು’ ಎಂದು ಘೋಷಿಸಿದೆ.

 ವಿದೇಶಿಗರ ನ್ಯಾಯಾಧಿಕರಣ ಜುಲೈಯಲ್ಲಿ ನೀಡಿದ ಏಕಪಕ್ಷೀಯ ತೀರ್ಪಿನಲ್ಲಿ ಮುಜೀಬುರ್ರಹ್ಮಾನ್ ಹಾಗೂ ಅವರ ಪತ್ನಿಯನ್ನು ವಿದೇಶಿಗರು ಎಂದು ಘೋಷಿಸಿದೆ. ಮುಜೀಬುರ್ರಹ್ಮಾನ್ ಅವರ ಹೆತ್ತವರು ಹಾಗೂ ಒಡಹುಟ್ಟಿದವರ ಪೌರತ್ವದ ಬಗ್ಗೆ ಯಾವುದೇ ಸಂದೇಹ ಇಲ್ಲ. ಮುಜೀಬುರ್ರಹ್ಮಾನ್ ಅವರ ಕುಟುಂಬ ಅಸ್ಸಾಂ-ನಾಗಾಲ್ಯಂಡ್ ಗಡಿಗೆ ಸಮೀಪದ ಗೋಲಾಘಾಟ್ ಜಿಲ್ಲೆಯ ಉದಯಪುರ-ಮಿಕಿರ್‌ಪಟ್ಟಿಯಲ್ಲಿ ಮೂಲ ಹೊಂದಿದೆ. ಮುಜೀಬುರ್ರಹ್ಮಾನ್ ಅವರನ್ನು ಪ್ರಸ್ತುತ ಪಂಜಾಬ್‌ನಲ್ಲಿ ನಿಯೋಜಿಸಲಾಗಿದೆ.

ಜುಲೈ ಕೊನೆಯ ವಾರದಲ್ಲಿ ಮನೆಗೆ ಆಗಮಿಸಿದಾಗ ಈ ವಿಷಯ ಅವರಿಗೆ ತಿಳಿಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಜೀಬುರ್ರಹ್ಮಾನ್, ಮದ್ಯಪಾನಿಯೊಬ್ಬರ ಹೇಳಿಕೆ ಆಧರಿಸಿ ಅಸ್ಸಾಂ ಪೊಲೀಸ್‌ನ ಗಡಿ ಘಟಕ ವಿದೇಶಿಗರ ನ್ಯಾಯಾಧಿಕರಣಕ್ಕೆ ನನ್ನ ವಿರುದ್ಧ ವರದಿ ಸಲ್ಲಿಸಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News