ಕಾಶ್ಮೀರ: ಉದ್ವಿಗ್ನತೆ ಶಮನಕ್ಕೆ ಅಮೆರಿಕದ ಅವಳಿ ಸೂತ್ರ

Update: 2019-08-24 17:49 GMT

ವಾಶಿಂಗ್ಟನ್,ಆ.15: ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಮೆರಿಕವು ಎರಡು ಭಾಗಗಳನ್ನೊಳಗೊಂಡ ಕಾರ್ಯತಂತ್ರವನ್ನು ರೂಪಿಸಲು ಅಮೆರಿಕವು ಶ್ರಮಿಸುತ್ತಿರುವುದಾಗಿ, ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

   ಅಮೆರಿಕವು ತನ್ನ ಕಾರ್ಯತಂತ್ರದ ಮೊದಲ ಭಾಗವಾಗಿ, ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಅರ್ಥಿಕ ಅಥವಾ ಭೌತಿಕ ನೆರವು ನೀಡುವುದನ್ನು ಅಥವಾ ಗಡಿಯಾಚೆಗಿನ ಒಳನುಸುಳುವಿಕೆಯಲ್ಲಿ ತೊಡಗುವುದನ್ನು ಸ್ಥಗಿತಗೊಳಿಸುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಲಿದೆಯಂದು ಅವರು ತಿಳಿಸಿದ್ದಾರೆ.

 ಎರಡನೆ ಕಾರ್ಯತಂತ್ರದಲ್ಲಿ ಭಾರತವು ಜಮ್ಮುಕಾಶ್ಮೀರದಲ್ಲಿ ಸಹಜತೆಯನ್ನು ಮರಳಿಸುವಂತೆ ಹಾಗೂ ಜನತೆಯ ಮಾನವಹಕ್ಕುಳು ರಕ್ಷಿಸಲ್ಡುವುದನ್ನು ಖಾತರಿಪಡಿಸುವಂತೆ ಮತ್ತು ಕಾಶೀರದ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಲು ಹಾಗೂ ಸಂವಹನ ಮಾಧ್ಯಮಗಳನ್ನು ಪುನಾರಂಭಿಸುವಂತೆ ಭಾರತವನ್ನು ಉತ್ತೇಜಿಸಲಾಗುವುದು ಎಂದು ಅಮೆರಿಕದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿನಿಯಂತ್ರಣ ರೇಖೆಯುದ್ದಕ್ಕೂ ಉಗ್ರರ ಒಳನುಸುಳುವಿಕೆಯನ್ನು ತಡೆಯುವಂತೆ ಹಾಗೂ ಈ ಹಿಂದೆ ಭಾರತದ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕ ಗುಂಪುಗಳನ್ನು ಸದೆಬಡಿಯುವಂತೆ ಪಾಕಿಸ್ತಾನಕ್ಕೆ ಕರೆ ನೀಡುತ್ತದೆ ಎಂದು ಅಮೆರಿಕ ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News