95 ನಿಮಿಷ ಕ್ರೀಸ್‌ನಲ್ಲಿದ್ದರೂ ಶೂನ್ಯ ಸಂಪಾದಿಸಿದ ವಿಂಡೀಸ್ ಆಟಗಾರ

Update: 2019-08-25 05:35 GMT

ಆ್ಯಂಟಿಗುವಾ, ಆ.25: ವೆಸ್ಟ್‌ ಇಂಡೀಸ್‌ನ ಬಾಲಂಗೋಚಿ ಮಿಗುಯೆಲ್ ಕಮಿನ್ಸ್ ಭಾರತ ವಿರುದ್ಧ ಮೊದಲ ಟೆಸ್ಟ್‌ನ ಮೂರನೇ ದಿನದಾಟವಾದ ಶನಿವಾರ 95 ನಿಮಿಷಗಳ ಕಾಲ ಕ್ರೀಸ್‌ ನಲ್ಲಿ ನಿಂತುಕೊಂಡು 45 ಎಸೆತಗಳನ್ನು ಎದುರಿಸಿದರೂ ಒಂದೂ ರನ್ ಗಳಿಸಲಾಗದೇ ಶೂನ್ಯಕ್ಕೆ ಔಟಾದರು. ಈ ಮೂಲಕ ಅನಗತ್ಯ ದಾಖಲೆ ನಿರ್ಮಿಸಿದರು.

ಕಮಿನ್ಸ್ ವಿಕೆಟ್ ಪತನ ಗೊಳ್ಳುವುದರೊಂದಿಗೆ ವಿಂಡೀಸ್ ಮೊದಲ ಇನಿಂಗ್ಸ್‌ನಲ್ಲಿ 222 ರನ್‌ಗೆ ಆಲೌಟಾಗಿತ್ತು. ಭಾರತಕ್ಕೆ 75 ರನ್ ಇನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟಿತ್ತು.

ಟೆಸ್ಟ್ ಕ್ರಿಕೆಟ್‌ನಲ್ಲಿ ಆಟಗಾರನೊಬ್ಬ ದೀರ್ಘ ಸಮಯ ಕ್ರೀಸ್‌ ನಲ್ಲಿದ್ದರೂ ಸ್ಕೋರ್ ಗಳಿಸದೇ ಔಟಾಗಿರುವುದು ಇದೇ ಎರಡನೇ ಸಲ. ಈ ದಾಖಲೆ ಈಗಲೂ ನ್ಯೂಝಿಲ್ಯಾಂಡ್‌ನ ಜೆಫ್ ಅಲಾಟ್ ಹೆಸರಲ್ಲಿದೆ. ಅಲಾಟ್ 1999ರಲ್ಲಿ ಆಕ್ಲಂಡ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್‌ನಲ್ಲಿ 101 ನಿಮಿಷ ಕ್ರೀಸ್‌ನಲ್ಲಿದ್ದರೂ ಒಂದೂ ರನ್ ಗಳಿಸದೇ ಔಟಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News