ಬುಲಂದ್ ಶಹರ್ ಗಲಭೆ ಆರೋಪಿಗಳನ್ನು ಜೈಲಿಗಟ್ಟಿ: ಮೃತ ಪೊಲೀಸ್ ಅಧಿಕಾರಿಯ ಕುಟುಂಬದ ಆಗ್ರಹ

Update: 2019-08-26 17:23 GMT

ಹೊಸದಿಲ್ಲಿ, ಆ.26: ಬುಲಂದ್ ಶಹರ್ ಗಲಭೆ ಪ್ರಕರಣದ ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದು, ಈ ದುಷ್ಕರ್ಮಿಗಳನ್ನು ಜೈಲಿಗಟ್ಟಬೇಕು ಎಂದು ಬುಲಂದ್ ಶಹರ್ ಗಲಭೆ ವೇಳೆ ಕೊಲೆಗೀಡಾದ ಪೊಲೀಸ್ ಅಧಿಕಾರಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಸ್ಥಳೀಯ ಕೋರ್ಟ್ ಜಾಮೀನು ನೀಡಿದ ನಂತರ 6 ಆರೋಪಿಗಳು ಜೈಲಿನಿಂದ ಬಿಡುಗಡೆಗೊಂಡಿದ್ದರು. ಈ ಸಂದರ್ಭ ಇವರನ್ನು ‘ಜೈ ಶ್ರೀರಾಂ’, ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಗಳೊಂದಿಗೆ ಸ್ವಾಗತಿಸಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಈ ಘಟನೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

“6 ತಿಂಗಳುಗಳ ಕಾಲ ಜೈಲಿನಲ್ಲಿದ್ದ ಈ ದುಷ್ಕರ್ಮಿಗಳನ್ನು ಜೈಲಿಗಟ್ಟಬೇಕು ಎಂದು ನಾನು ಮುಖ್ಯಮಂತ್ರಿ ಆದಿತ್ಯನಾಥ್ ರನ್ನು ಆಗ್ರಹಿಸುತ್ತಿದ್ದೇನೆ. ಇಂತಹ ಕೃತ್ಯಗಳನ್ನು ಒಮ್ಮೆ ಎಸಗಿದವರು ಮತ್ತೊಮ್ಮೆ ಎಸಗುತ್ತಾರೆ. ಜಾಮೀನಿನಲ್ಲಿ ಬಿಡುಗಡೆಗೊಳ್ಳುವ ಇಂತಹವರು ನಮಗೆ ಮಾತ್ರವಲ್ಲ, ಇತರರಿಗೂ ಅಪಾಯಕಾರಿ” ಎಂದು ಮೃತ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ರ ಪುತ್ರ ಶ್ರೇಯ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News