×
Ad

ಫೇಸ್‌ಬುಕ್‌ನಲ್ಲಿ ಶ್ರೀಕೃಷ್ಣನಿಗೆ ಅವಮಾನ,ಆರೋಪಿ ಬಂಧನ

Update: 2019-08-28 21:31 IST

ಬಹರೈಚ್(ಉ.ಪ್ರ.),ಆ.28: ತನ್ನ ಫೇಸ್‌ಬುಕ್ ಪುಟದಲ್ಲಿ ಶ್ರೀಕೃಷ್ಣನ ಕುರಿತು ಅವಮಾನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿರುವ ಆರೋಪದಲ್ಲಿ ನಂದ್ವಾಲ್ ಗ್ರಾಮದ ನಿವಾಸಿ ಮುಬಿನ್ ಹಾಷ್ಮಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಹಾಷ್ಮಿ ಆ.25ರಂದು ತನ್ನ ಫೇಸಬುಕ್ ಪೇಜ್‌ನಲ್ಲಿ ಈ ಹೇಳಿಕೆಯನ್ನು ಪೋಸ್ಟ್ ಮಾಡಿದ್ದು,ಇದು ತಮ್ಮ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದೆ ಎಂದು ಕೆಲವು ಸ್ಥಳೀಯರು ದೂರು ದಾಖಲಿಸಿದ್ದರು ಎಂದು ತಿಳಿಸಿದ ಎಸ್‌ಪಿ ಗೌರವ ಗ್ರೋವರ್ ಅವರು,ಪೋಸ್ಟ್‌ನ ಮೂಲವನ್ನು ತಿಳಿದುಕೊಳ್ಳಲು ಪ್ರಯತ್ನಗಳು ಜಾರಿಯಲ್ಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News