ಮೈಕಲ್ ಜಾಕ್ಸನ್ ಹೆಸರಿನಲ್ಲಿರುವ ಗಿನ್ನೆಸ್ ದಾಖಲೆಗಳು ಎಷ್ಟು ಗೊತ್ತಾ?: ಪಾಪ್ ಕಿಂಗ್ ಕುರಿತ ಕುತೂಹಲಕಾರಿ ಮಾಹಿತಿಗಳು

Update: 2019-08-29 06:43 GMT

ಪಾಪ್ ಕಿಂಗ್ ಮೈಕೆಲ್ ಜಾಕ್ಸನ್ ಅವರು ಪಾಪ್ ಸಂಗೀತಕ್ಕೆ ಹೊಸ ಅರ್ಥ ನೀಡಿದವರು. ಜಗತ್ತಿನಾದ್ಯಂತ ಲಕ್ಷೋಪಲಕ್ಷ ಅಭಿಮಾನಿಗಳನ್ನು ಹೊಂದಿರುವ ಮೈಕೆಲ್ ಜಾಕ್ಸನ್ ಕುರಿತಾದ ಕೆಲವೊಂದು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.

► ಇಂಡಿಯಾನದ ಗೇರಿ ಎಂಬಲ್ಲಿ ಆಗಸ್ಟ್ 29, 1858ರಲ್ಲಿ ಹುಟ್ಟಿದ್ದ ಮೈಕಲ್ ಜಾಕ್ಸನ್ ಅವರ ತಂದೆ ಬಾಕ್ಸರ್ ಹಾಗೂ ಗಿಟಾರ್ ವಾದಕರಾಗಿದ್ದರು. ವೃತ್ತಿಯಲ್ಲಿ ಅವರು ಕ್ರೇನ್ ಆಪರೇಟರ್ ಆಗಿದ್ದರು. ಅವರ ತಾಯಿ ಕ್ಯಾಥರೀನ್ ಎಸ್ತರ್ ಸ್ಕ್ರೂಸ್  ಡಿಪಾರ್ಟ್‍ಮೆಂಟಲ್ ಸ್ಟೋರ್ ಒಂದರಲ್ಲಿ ಅರೆಕಾಲಿಕ ಉದ್ಯೋಗಿಯಾಗಿದ್ದರು.

► ಮೈಕೆಲ್ ಅವರ ತಂದೆ ತಮ್ಮ ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು.

► ತಮ್ಮ ಐದನೇ ವಯಸ್ಸಿನಲ್ಲಿ ಮೈಕೆಲ್ ಜಾಕ್ಸನ್ ಅವರು ಸಾರ್ವಜನಿಕ ಪ್ರದರ್ಶನ ಮೊತ್ತ ಮೊದಲ ಬಾರಿ ನೀಡಿ ಕ್ಲೈಂಬ್ ಎವ್ರಿ ಮೌಂಟೆನ್ ಹಾಡು ಹಾಡಿದ್ದರು.

► ಅವರ ಹಾಡು `ಬಿಲ್ಲೀ ಜೀನ್'  ಎಂಟಿವಿಯಲ್ಲಿ ಪ್ರಸಾರಗೊಂಡ ಕರಿಯ ಕಲಾವಿದನೊಬ್ಬನ ಪ್ರಥಮ ಹಾಡು ಆಗಿತ್ತು.

► 1983ರಲ್ಲಿ ಅವರ ಆಲ್ಬಂ ಥ್ರಿಲ್ಲರ್ ವಿಶ್ವದಾದ್ಯಂತ ಹಿಟ್ ಆಗಿ 6.5 ಕೋಟಿ ಪ್ರತಿಗಳು ಮಾರಾಟವಾಗಿದ್ದವು. ತಮ್ಮ ಜಗದ್ವಿಖ್ಯಾತ ಡ್ಯಾನ್ಸ್ ಶೈಲಿ `ದಿ ಮೂನ್ ವಾಕ್' ಅನ್ನು ಇದೇ  ವರ್ಷ ಅವರು ಪ್ರದರ್ಶಿಸಿದ್ದರು.

► ಪೆಪ್ಸಿ ಕೋಲಾ ಜತೆ 50 ಲಕ್ಷ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಜಾಹೀರಾತಿಗೆ  ಚಿತ್ರೀಕರಣ ನಡೆಸುತ್ತಿರುವ ವೇಳೆ ತೀವ್ರ ಗಾಯಗೊಂಡ ಮೈಕೆಲ್ ಮುಖ ಮತ್ತು ತಲೆಗೆ ಸುಟ್ಟ ಗಾಯವಾಗಿತ್ತು.

► ಮೈಕೆಲ್ ಜಾಕ್ಸನ್ ಹೆಸರಿನಲ್ಲಿ 23 ಗಿನ್ನೆಸ್ ದಾಖಲೆಗಳಿವೆ, 40 ಬಿಲ್ ಬೋರ್ಡ್ ಪ್ರಶಸ್ತಿಗಳು 13 ಗ್ರಾಮ್ಮಿ ಪ್ರಶಸ್ತಿಗಳು ಹಾಗೂ 26 ಅಮೆರಿಕನ್ ಮ್ಯೂಸಿಕ್ ಅವಾರ್ಡ್ ದೊರಕಿವೆ.

► ಮೈಕೆಲ್ ಜಾಕ್ಸನ್  ಹಾಗೂ ಜಾನೆಟ್ ಜಾಕ್ಸನ್ ಅವರು ಅತ್ಯಂತ ದುಬಾರಿ ವೀಡಿಯೋ `ಸ್ಕ್ರೀಮ್'  70 ಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಿಸಿದ್ದರು.

► 1993ರಲ್ಲಿ ಅವರಿಗೆ ಚರ್ಮದ ರೋಗ ವಿಟಿಲಿಗೊ ಕಾಡಿತ್ತು.

► 1994ರಲ್ಲಿ ಅವರು ಲಿಸಾ ಮಾರಿ ಪ್ರೆಸ್ಲಿ ಅವರನ್ನು ವಿವಾಹವಾದರೂ ಈ ವಿವಾಹ ಕೇವಲ 19 ತಿಂಗಳಿನಲ್ಲಿ ಮುರಿದು ಬಿದ್ದಿತ್ತು. ಮುಂದೆ 1996ರಲ್ಲಿ ಅವರು ದೆಬೊರಾಹ್ ಜೀನ್ ರೋವ್ ಅವರನ್ನು ವಿವಾಹವಾಗಿ ಎರಡು ಮಕ್ಕಳನ್ನು ಪಡೆದರೂ 1999ರಲ್ಲಿ ಇಬ್ಬರೂ ಪ್ರತ್ಯೇಕಗೊಂಡಿದ್ದರು.

► ‘ಸ್ಮೂತ್ ಕ್ರಿಮಿನಲ್’ನಲ್ಲಿ ಮೈಕೆಲ್ ಜಾಕ್ಸನ್ ಅವರ ಜನಪ್ರಿಯ `ಲೀನ್' ವಿಶೇಷ ಪೇಟೆಂಟ್ ಹೊಂದಿದ್ದ `ಆ್ಯಂಟಿ ಗ್ರಾವಿಟಿ ಇಲ್ಲ್ಯೂಶನ್' ಹೊಂದಿದ್ದ ಶೂನಿಂದಾಗಿತ್ತು.

►ಮೈಕೆಲ್ ಜಾಕ್ಸನ್ ಅವರು ಇಲಿಗಳು, ಹಾವು, ಹಕ್ಕುಗಳು, ಹುಲಿಗಳು, ನಾಯಿಗಳು ಹಾಗೂ ಬೆಕ್ಕುಗಳನ್ನು ಪ್ರೀತಿಯಿಂದ ಸಲಹಿದ್ದರೂ ಅವರ ಅಚ್ಚುಮೆಚ್ಚಿನ ಸಾಕು ಪ್ರಾಣಿ ಬಬ್ಬಲ್ಸ್ ಹೆಸರಿನ ಚಿಂಪಾಂಜಿಯಾಗಿತ್ತು.

► ನೂರೈವತ್ತು ವರ್ಷ ಬದುಕಲು ಬಯಸಿದ್ದ ಮೈಕೆಲ್ ಜಾಕ್ಸನ್ ಅದಕ್ಕಾಗಿಯೆಂದೇ ಶೇ 100ರಷ್ಟು ಆಮ್ಲಜನಕ ಇರುವ ಕಸ್ಟಮೈಸ್ಡ್ ಮೆಡಿಕಲ್ ಚೇಂಬರ್‍ನಲ್ಲಿ ಆಗಾಗ ಮಲಗುತ್ತಿದ್ದರು ಎನ್ನುವ ವದಂತಿಯಿದೆ.

► ಜಾಕ್ಸನ್ ತನಗೆ ಐದು ತಿಂಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದರೆಂದು ಆಗಸ್ಟ್ 1993ರಲ್ಲಿ ಜೋರ್ಡಿ ಚಂಡ್ಲೆರ್ ಎಂಬ 13 ವರ್ಷದ ಬಾಲಕ ಆರೋಪಿಸಿದ್ದ. ಜಾಕ್ಸನ್ ತನ್ನ ಜತೆ ಸ್ನಾನ ಮಾಡುತ್ತಿದ್ದರು, ತನಗೆ ಉಡುಗೊರೆ ನೀಡುತ್ತಿದ್ದರು ಹಾಗೂ ತನ್ನ ಜತೆ ಮಲಗುತ್ತಿದ್ದರೆಂದು ಆತ ದೂರಿದ್ದ. ಈ ಪ್ರಕರಣಕ್ಕೆ ಅಂತ್ಯ ಹಾಡಲು ಮೈಕೆಲ್ 25 ಮಿಲಿಯನ್ ಡಾಲರ್ ಪರಿಹಾರ ನೀಡಬೇಕಾಯಿತು.

 ► ಪೆಪ್ಸಿ ಜಾಹೀರಾತಿಗೆ ಚಿತ್ರೀಕರಣದ ವೇಳೆ ಬೆಂಕಿ ಅವಘಡದಲ್ಲಿ ಜಾಕ್ಸನ್ ತಲೆಗೂ ಸುಟ್ಟ ಗಾಯವಾಗಿದ್ದರಿಂದ ಅವರ ತಲೆ ಬೋಳಾಗಿತ್ತು. ನಂತರ ಅವರು ಅನಿವಾರ್ಯವಾಗಿ ವಿಗ್ ಧರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News