ದೇಶಾದ್ಯಂತ 150 ಸರಕಾರಿ ಇಲಾಖೆಗಳಲ್ಲಿ ಸಿಬಿಐ ತಪಾಸಣೆ
ಹೊಸದಿಲ್ಲಿ, ಆ. 30: ದೇಶದ 150 ಸರಕಾರಿ ಇಲಾಖೆಗಳಲ್ಲಿ ಸಿಬಿಐ ವಿಶೇಷ ಅನಿರೀಕ್ಷಿತ ತಪಾಸಣೆ ನಡೆಸಿದೆ. ರೈಲ್ವೆ, ಕಲ್ಲಿದ್ದಲು ಸೇರಿದಂತೆ ಪ್ರಮುಖ ಸರಕಾರಿ ಇಲಾಖೆಗಳು ಸಿಬಿಐ ಪರಿಶೀಲನೆಗೆ ಒಳಗಾಗಿವೆ. ಭ್ರಷ್ಟಾಚಾರದ ಶಂಕೆಯಲ್ಲಿ ಸಿಬಿಐ ದೇಶದ ವಿವಿಧ ನಗರಗಳಲ್ಲಿ ಈ ತಪಾಸಣೆ ನಡೆಸಿದೆ.
ರೈಲ್ವೆ, ಬಿಎಸ್‌ಎನ್‌ಎಲ್, ಶಿಪ್ಪಿಂಗ್, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಕಲ್ಲಿದ್ದಲು ಗಣಿ, ಭಾರತೀಯ ಆಹಾರ ನಿಗಮ, ಕಸ್ಟಮ್ಸ್, ವಿದ್ಯುತ್, ನಗರಾಡಳಿತ, ಕಂಟೋನ್ಮೆಂಟ್ ಮಂಡಳಿ, ಸಾರಿಗೆ, ಕೇಂದ್ರ ಲೋಕೋಪಯೋಗಿ ಇಲಾಖೆ, ರಾಜ್ಯ ಜಾರಿ ನಿರ್ದೇಶನಾಲಯ, ಅಗ್ನಿಶಾಮಕದಳ, ಕೈಗಾರಿಕೆ, ಜಿಎಸ್‌ಟಿ, ಬಂದರು ಟ್ರಸ್ಟ್, ಅಡಿಯೊ-ವಿಶುವಲ್ ಪ್ರಸಾರ ನಿರ್ದೇಶನಾಲಯ, ವಿದೇಶ ವ್ಯಾಪಾರದ ಪ್ರಧಾನ ನಿರ್ದೇಶನಾಲಯ, ಭಾರತೀಯ ಪುರಾತತ್ವ ಸಮೀಕ್ಷೆ, ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಇಂದು ಬೆಳಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ಸಿಬಿಐ ತಿಳಿಸಿದೆ.
ಶ್ರೀನಗರ, ದಿಲ್ಲಿ, ಜೈಪುರ, ಜೋಧ್‌ಪುರ, ಗುವಾಹತಿ, ಶಿಲ್ಲಾಂಗ್, ಚಂಡಿಗಢ, ಶಿಮ್ಲಾ, ಚೆನ್ನೈ, ಮಧುರೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಮುಂಬೈ, ಪುಣೆ, ಗಾಂಧಿನಗರ, ಗೋವಾ, ಭೋಪಾಲ, ಜಬಲ್‌ಪುರ, ನಾಗಪುರ, ಪಾಟ್ನಾ, ರಾಂಚಿ, ಗಾಝಿಯಾಬಾದ್, ಡೆಹ್ರಾಡೂನ್, ಲಕ್ನೋ, ವಡೋದರಾ, ಅಹ್ಮದಾಬಾದ್ ಹಾಗೂ ಕೊಚ್ಚಿನ್ ಸೇರಿದಂತೆ ವಿವಿಧ ನಗರಗಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.