×
Ad

ಬಹುಕೋಟಿ ವಸತಿ ಹಗರಣ: ಶಿವಸೇನೆ ನಾಯಕನಿಗೆ 7 ವರ್ಷ ಜೈಲು ಶಿಕ್ಷೆ, 100 ಕೋಟಿ ರೂ. ದಂಡ

Update: 2019-08-31 20:31 IST

ಮುಂಬೈ, ಆ.31: ಬಹುಕೋಟಿ ‘ಘಾರ್ಕುಲ್’ ವಸತಿ ಹಗರಣದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವರಾದ ಸುರೇಶ್ ಜೈನ್ ಮತ್ತು ಗುಲಾಬ್ ರಾವ್ ದಿಯೋಕರ್ ಸೇರಿ 46 ಮಂದಿಗೆ ಇಲ್ಲಿನ ಸೆಶನ್ಸ್ ಕೋರ್ಟ್ 3ರಿಂದ 7 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಿದೆ.

ಹಗರಣಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಧೀಶ ಸೃಷ್ಟಿ ನೀಲಕಂಠ್ ಶಿವಸೇನೆ ನಾಯಕ, ಮಾಜಿ ಸಚಿವ ಸುರೇಶ್ ಜೈನ್ ರಿಗೆ 7 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು 100 ಕೋಟಿ ರೂ. ದಂಡ ವಿಧಿಸಿ ತೀರ್ಪಿತ್ತರು.

ಗುಲಾಬ್ ರಾವ್ ದಿಯೋಕರ್ ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಇನ್ನುಳಿದ 46 ಆರೋಪಿಗಳಿಗೆ 3ರಿಂದ 7 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಲಾಗಿದೆ. ಈ ಆರೋಪಿಗಳಲ್ಲಿ ಕೆಲ ಮಾಜಿ ಕೌನ್ಸಿಲರ್ ಗಳು ಮತ್ತು ಅಧಿಕಾರಿಗಳು ಸೇರಿದ್ದಾರೆ.

1990ರಲ್ಲಿ ಸಚಿವರಾಗಿದ್ದಾಗ ಸುರೇಶ್ ಜೈನ್ ಒಳಗೊಂಡಿದ್ದ 29 ಕೋಟಿ ವಸತಿ ಹಗರಣಕ್ಕೆ ಸಂಬಂಧಿಸಿ ಅವರನ್ನು 2012ರಲ್ಲಿ ಬಂಧಿಸಲಾಗಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News