×
Ad

ಆಗಸ್ಟ್‌ನಲ್ಲಿ 98,202 ಕೋ.ರೂ.ಗೆ ಕುಸಿದ ಜಿಎಸ್‌ಟಿ ಸಂಗ್ರಹ

Update: 2019-09-01 19:46 IST

ಹೊಸದಿಲ್ಲಿ,ಸೆ.1: ಆಗಸ್ಟ್‌ನಲ್ಲಿ ದೇಶಾದ್ಯಂತ ಜಿಎಸ್‌ಟಿ ಸಂಗ್ರಹವು 98,202 ಕೋ.ರೂ.ಗೆ ಕುಸಿದಿದೆ. ಜುಲೈನಲ್ಲಿ 1.02 ಲ.ಕೋ.ರೂ.ಜಿಎಸ್‌ಟಿ ಸಂಗ್ರಹವಾಗಿತ್ತು ಎಂದು ರವಿವಾರ ಬಿಡುಗಡೆಗೊಳಿಸಲಾದ ಅಧಿಕೃತ ಹೇಳಿಕೆಯು ತಿಳಿಸಿದೆ.

ಆದರೆ ಕಳೆದ ವರ್ಷದ ಇದೇ ಅವಧಿಯಲ್ಲಿನ 93,960 ಕೋ.ರೂ.ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲ್ಲಿ ಜಿಎಸ್‌ಟಿ ಸಂಗ್ರಹವು ಶೇ.4.5ರಷ್ಟು ಹೆಚ್ಚಾಗಿದೆ.

ಜಿಎಸ್‌ಟಿ ಸಂಗ್ರಹವು ಒಂದು ಲ.ಕೋ.ರೂ.ಗಿಂತ ಕಡಿಮೆಯಾಗಿರುವುದು ಇದು ಈ ವರ್ಷದಲ್ಲಿ ಎರಡನೇ ಸಲವಾಗಿದೆ. ಜೂನ್‌ನಲ್ಲಿ ಅದು 99,939 ಕೋ.ರೂ.ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News