ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವಾಲಯದ ತಂಡದಿಂದ ನಾಳೆ ಜಮ್ಮು-ಕಾಶ್ಮೀರ ಭೇಟಿ

Update: 2019-09-04 13:26 GMT

ಹೊಸದಿಲ್ಲಿ,ಸೆ.4: ಜಮ್ಮು-ಕಾಶ್ಮೀರದಲ್ಲಿ ಜಾರಿಗೊಳಿಸಬಹುದಾದ ನೂತನ ಸುಧಾರಣೆಗಳು ಮತ್ತು ಅತ್ಯುತ್ತಮ ಪದ್ಧತಿಗಳ ಬಗ್ಗೆ ಪರಿಶೀಲಿಸಲು ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳ ಉನ್ನತ ಮಟ್ಟದ ತಂಡವೊಂದು ಗುರುವಾರ ರಾಜ್ಯಕ್ಕೆ ಭೇಟಿ ನೀಡಲಿದೆ.

ಮಹಿಳಾ ಸಬಲೀಕರಣಕ್ಕೆ ಒತ್ತು, ಸುಸ್ಥಿರ ಜೀವನೋಪಾಯ ಮತ್ತು ಪರಿಸರ ಪ್ರವಾಸೋದ್ಯಮ ಇತ್ಯಾದಿಗಳ ಕುರಿತು ಅಭಿಪ್ರಾಯಗಳ ವಿನಿಮಯ ಹಾಗೂ ರಾಜ್ಯದಲ್ಲಿ ಜಾರಿಗೊಳಿಸಬಹುದಾದ ನೂತನ ಸುಧಾರಣೆಗಳು ಮತ್ತು ಅತ್ಯುತ್ತಮ ಪದ್ಧತಿಗಳ ಪರಿಶೀಲನೆ ತಂಡದ ಭೇಟಿಯ ಮುಖ್ಯ ಉದ್ದೇಶಗಳಾಗಿವೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ತಂಡವು ಈಶಾನ್ಯ ರಾಜ್ಯಗಳು ಮತ್ತು ಜಮ್ಮು-ಕಾಶ್ಮೀರದ ರೈತರು ಹಾಗೂ ಕುಶಲಕರ್ಮಿಗಳಿಗಾಗಿ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೂ ಗಮನ ಕೇಂದ್ರೀಕರಿಸಲಿದೆ.

ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡಲು ಜಮ್ಮು-ಕಾಶ್ಮೀರದಲ್ಲಿ ಸಚಿವಾಲಯದಿಂದ ಶೋರೂಮ್‌ಗಳ ಸ್ಥಾಪನೆ, ಸಮುದಾಯ ಆಧಾರಿತ ನೈಸರ್ಗಿಕ ಸಂಪನ್ಮೂಲ ವ್ಯವಸ್ಥಾಪನೆ,ಜಮ್ಮು-ಕಾಶ್ಮೀರದ ಕುಶಲಕರ್ಮಿಗಳಿಗೆ ತರಬೇತಿ ,ಕೌಶಲ್ಯಾಭಿವೃದ್ಧಿಗಾಗಿ ಸಹಭಾಗಿತ್ವ ಕಾರ್ಯಕ್ರಮಗಳು ಇತ್ಯಾದಿಗಳ ಕಾರ್ಯಸಾಧ್ಯತೆಗಳ ಬಗ್ಗೆಯೂ ತಂಡವು ಪರಿಶೀಲನೆಯನ್ನು ನಡೆಸಲಿದೆ ಎಂದು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News