ಶುಲ್ಕ ಪಾವತಿಸಿದ ಬಳಿಕವೂ ಇವಿಎಂ, ವಿವಿಪ್ಯಾಟ್ ಬಗ್ಗೆ ಆರ್‌ ಟಿಐ ಮಾಹಿತಿ ನೀಡದ ಬಿಇಎಲ್!

Update: 2019-09-04 17:24 GMT

2019ರ ಜೂನ್ ‌ನಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರು ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ)ಗಳು ಹಾಗೂ ವಿವಿಪ್ಯಾಟ್ ಯೂನಿಟ್‌ ಗಳು ಮತ್ತು ಸಿಂಬಲ್ ಲೋಡಿಂಗ್ ಯೂನಿಟ್(ಎಸ್‌ಎಲ್‌ಯು) ಬಗ್ಗೆ ಆರ್‌ ಟಿಐ ಕಾಯ್ದೆಯಡಿ ಭಾರತೀಯ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನಿಂದ ವಿಸ್ತೃತವಾದ ಮಾಹಿತಿಯನ್ನು ಕೋರಿದ್ದರು. ಇದಕ್ಕಾಗಿ ತಾನು ಶುಲ್ಕ ಪಾವತಿಸಿದ ಬಳಿಕವೂ ಮಾಹಿತಿಯನ್ನು ನೀಡಲು ಭಾರತೀಯ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಿರಾಕರಿಸಿದೆಯೆಂದು ಅವರು ಆರೋಪಿಸಿದ್ದಾರೆ.

ಮತಗಳನ್ನು ಮುದ್ರಿಸುವಲ್ಲಿ ವಿವಿಪ್ಯಾಟ್ ಯಂತ್ರಗಳ ಗರಿಷ್ಠ ಸಾಮರ್ಥ್ಯ ಹಾಗೂ ಮತಗಟ್ಟೆಗಳಲ್ಲಿ ದಾಖಲಾದ ಮತದಾರರ ಪ್ರಮಾಣಕ್ಕೂ ಹಲವೆಡೆ ಅಜಗಜಾಂತರ ವ್ಯತ್ಯಾಸಗಳು ಕಂಡುಬಂದಿದೆಯೆಂಬ ವರದಿಗಳು ಇಡೀ ಚುನಾವಣಾ ಪ್ರಕ್ರಿಯೆ ಬಗ್ಗೆ ಆತಂಕಕಾರಿ ಬೆಳಕನ್ನು ಚೆಲ್ಲಿದ ಬಳಿಕ ನಾಯಕ್ ಅವರು ಬಿಇಎಲ್ ಹಾಗೂ ಇಸಿಐಎಲ್‌ಗೆ ಮನವಿ ಸಲ್ಲಿಸಿದ್ದರು.

ದೇಶಾದ್ಯಂತ ಆಯೋಜಿಸಲಾದ ಚುನಾವಣೆಗಳನ್ನು ನಿರ್ವಹಿಸಿರುವ ಬಗ್ಗೆ ಅಸಮಾಧಾನಗೊಂಡಿರುವ ಹಲವಾರು ಪ್ರಜ್ಞಾವಂತ ನಾಗರಿಕರು ಹಾಗೂ ಮಾಧ್ಯಮ ಮಂದಿ ಆರ್‌ ಟಿಐ ಕಾಯ್ದೆಯನ್ನು ಬಳಸಿಕೊಂಡು, ಮತದಾನದ ಪ್ರಮಾಣಕ್ಕೂ, ವಿವಿ ಪ್ಯಾಟ್‌ ನಲ್ಲಿ ಮುದ್ರಿತವಾದ ಮತಗಳ ಸಂಖ್ಯೆ ಪರಸ್ಪರ ತಾಳೆಯಾಗದಿರುವ ಬಗ್ಗೆ ಪ್ರಶ್ನಿಸಿದ್ದರು.

ಆದರೆ ಸುಮಾರು ಒಂದು ತಿಂಗಳು ಸುಮ್ಮನಿದ್ದ ಸಿಪಿಐಒ, ಆರ್‌ ಟಿಐ ಮಾಹಿತಿ ಕೋರಿ ನಾಯಕ್ ಸಲ್ಲಿಸಿದ್ದ ಬ್ಯಾಂಕ್ ಡ್ರಾಫ್ಟ್ ಅನ್ನು ಹಿಂತಿರುಗಿಸಿತು ಹಾಗೂ ಅವರ ಮೊದಲ ಪ್ರಶ್ನೆಗೆ ಉತ್ತರಿಸಲು ತನ್ನ ಬಳಿ ಮಾಹಿತಿ ಇಲ್ಲವೆಂದು ಸಮಜಾಯಿಷಿ ನೀಡಿತ್ತು. ವಿವಿಪ್ಯಾಟ್ ಹಾಗೂ ಮತಯಂತ್ರಗಳ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿದಲ್ಲಿ ಎಂಜಿನಿಯರ್ ‌ಗಳ ಜೀವಕ್ಕೆ ಅಪಾಯವಿದೆಯೆಂಬ ಸಮಜಾಯಿಷಿಯನ್ನು ಕೂಡಾ ಅದು ನೀಡಿತ್ತು.

ಭಾರತೀಯ ಚುನಾಣಾ ಆಯೋಗವು ಪ್ರಕಟಿಸಿದ ಮಾಹಿತಿ ಹಾಗೂ ಅಂಕಿಅಂಶಗಳನ್ನು ಪರಿಶೀಲಿಸಿದ ವೆಂಕಟೇಶ್ ನಾಯಕ್ ಅವರು ಈ ಬಗ್ಗೆ ಮಾಹಿತಿ ಕೋರಿ ಭಾರತೀಯ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಹಾಗೂ ಇಸಿಐಎಲ್‌ಗೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಬಿಇಎಲ್‌ ನ ಘಟಕವಾದ ಸಿಪಿಐಒ ಸುಮಾರು ಒಂದು ತಿಂಗಳ ಬಳಿಕ 1,434 ರೂ. 717 ಪುಟಗಳ ಶುಲ್ಕ ಕುರಿತ ಮಾಹಿತಿ ಪತ್ರವನ್ನು ಕಳುಹಿಸಿಕೊಟ್ಟಿತ್ತು.

ಸಂಸ್ಥೆಯು ಬಹುತೇಕ ಮಾಹಿತಿಯನ್ನು ಪೂರೈಕೆ ಮಾಡಲು ಒಪ್ಪಿಕೊಂಡಿತು. ಆದರೆ ವಿವಿಪ್ಯಾಟ್ ಪೇಟೆಂಟ್ (ಹಕ್ಕುಸ್ವಾಮ್ಯ) ಬಗ್ಗೆ ಕೇಳಲಾದ ಅರ್ಜಿಗೆ ಉತ್ತರಿಸಲು ನಿರಾಕರಿಸಿತು. ಬಿಇಎಸ್ ಅಥವಾ ಇಸಿಐಎಲ್ ಆಗಲಿ ಇಲ್ಲವೇ ಇಸಿಐ ಆಗಲಿ ಈ ಮಾಹಿತಿಯನ್ನು ಸಾರ್ವಜನಿಕ ಜಾಲತಾಣದಲ್ಲಿ ಪ್ರಕಟಿಸಲು ನಿರಾಕರಿಸಿದೆಯೆಂದು ನಾಯಕ್ ಆರೋಪಿಸಿದ್ದಾರೆ.

ಆದರೆ 40 ದಿನಗಳ ಬಳಿಕವೂ ತನಗೆ ಮಾಹಿತಿ ದೊರಕದ ಹಿನ್ನೆಲೆಯಲ್ಲಿ ನಾಯಕ್ ಅವರು ಆರ್‌ ಟಿಐ ಕಾಯ್ದೆಯ ಸೆಕ್ಷನ್ 19(1)ರಡಿ ಮಾಹಿತಿಯನ್ನು ಸಲ್ಲಿಸದೆ ಇದ್ದುದಕ್ಕಾಗಿ ಮೊದಲ ಅಪೀಲು ಸಲ್ಲಿಸಿದ್ದರು.ಆದರೆ ಸಿಪಿಐಒ ಆ ಬಗ್ಗೆ ಈಗಲೂ ಮೌನವಾಗಿಯೇ ಇದೆ.

ಆದರೆ ಪಿಐಒ ಆರಂಭದಲ್ಲಿ ಇವಿಎಂಗಳು ಹಾಗೂ ವಿವಿಪ್ಯಾಟ್ ಯಂತ್ರಗಳ ಉತ್ಪಾದನೆ ಹಾಗೂ ವಿವಿಪ್ಯಾಟ್ ‌ಗಳು ಬಳಸಿದ ಥರ್ಮಲ್ ಪೇಪರ್ ಹಾಳೆಗಳ ಕುರಿತು ಮಾಹಿತಿಯನ್ನು ನೀಡಲು ಒಪ್ಪಿಕೊಂಡಿತ್ತು. ಚುನಾವಣೆಗಳಿಗಾಗಿ ಈ ಯಂತ್ರಗಳ ಸಿದ್ಧತೆಯ ಮೇಲ್ವಿಚಾರಣೆ ನಡೆಸಿದ ಹಾಗೂ ಸಮನ್ವಯಗೊಳಿಸಿದ ಇಂಜಿನಿಯರ್ ಗಳ ಪಟ್ಟಿಯನ್ನು ಪೂರೈಕೆ ಮಾಡಲು ಒಪ್ಪಿಕೊಂಡಿದೆ.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News