ಕೇಂದ್ರದಿಂದ ಪ್ರತೀಕಾರದ ರಾಜಕಾರಣ: ಡಿಕೆಶಿ ಬಂಧನಕ್ಕೆ ರಾಹುಲ್ ಟ್ವೀಟ್

Update: 2019-09-04 17:48 GMT

ಹೊಸದಿಲ್ಲಿ,ಸೆ.4:  ರಾಜ್ಯದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಬಂಧನವನ್ನು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರ ಸರಕಾರವು ಕೆಲವು ವ್ಯಕ್ತಿಗಳನ್ನು ಗುರಿಯಿರಿಸಲು, ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ವಿನಮ್ರವಾದ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಶಿವಕುಮಾರ್ ಅವರ ಬಂಧನವು ಕೇಂದ್ರ ಸರಕಾರದ ಪ್ರತೀಕಾರದ ರಾಜಕಾರಣವೆಂದು ಕಾಂಗ್ರೆಸ್ ಬಣ್ಣಿಸಿದೆ. ಸರಕಾರದ ವಿಫಲ ನೀತಿಗಳಿಂದ ಹಾಗೂ ದೇಶದ ಶೋಚನೀಯ ಆರ್ಥಿಕ ಪರಿಸ್ಥಿತಿಯಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಇದಾಗಿದೆಯೆಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ಮಾಜಿ ಕೇಂದ ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸಿದ ಘಟನೆಯ ಬಳಿಕ, ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳು ಸರಕಾರವು ಸೇಡಿನ ರಾಜಕೀಯದಲ್ಲಿ ತೊಡಗಿದೆಯೆಂದು ಆಪಾದಿಸಿದ್ದವು.

‘ಗೆಸ್ಟಾಪೊಗಳು’ (ಹಿಟ್ಲರ್‌ನ ಬೇಹುಗಾರರು) ಸಕ್ರಿಯರಾಗಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುವುದನ್ನು ಬಿಟ್ಟರೆ ಜಾರಿ ನಿರ್ದೇಶನಾಲಯಕ್ಕೆ ಇನ್ನೇನು ಮಾಡಲು ಸಾಧ್ಯ ಎಂದು ರಾಹುಲ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News