ಸಿಂಧು ಪಾತ್ರದಲ್ಲಿ ದೀಪಿಕಾ?

Update: 2019-09-07 15:15 GMT

ಬಾಲಿವುಡ್‌ನಲ್ಲಿ ಈಗ ಬಯೋಪಿಕ್‌ಗಳದ್ದೇ ಕಾರುಬಾರು ಈ ಸಾಲಿಗೆ ಹೊಸ ಸೇರ್ಪಡೆ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಕುರಿತ ಸಿನೆಮಾ. ಬಾಲಿವುಡ್ ಗಲ್ಲಿಗಳಿಂದ ಕೇಳಿಬರುತ್ತಿರುವ ಸುದ್ದಿಯನ್ನು ನಂಬುವುದಾದರೆ ನಟ ಸೋನು ಸೂದ್ ಪಿ.ವಿ ಸಿಂಧು ಕುರಿತ ಸಿನೆಮಾವನ್ನು ರಚಿಸುವ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಸೋನು ಸೂದ್ ಇತ್ತೀಚೆಗೆ ಅಧಿಕೃತ ಹೇಳಿಕೆ ನೀಡಿದ್ದಾರೆ ಮತ್ತು ತನ್ನ ಜೀವನ ಕುರಿತ ಸಿನೆಮಾದಲ್ಲಿ ದೀಪಿಕಾ ಪಡುಕೋಣೆಯೇ ತನ್ನ ಪಾತ್ರ ನಿಭಾಯಿಸಬೇಕು ಎಂದು ಸಿಂಧು ಹೇಳಿಕೊಂಡಿದ್ದಾರೆ. ನನ್ನ ಪ್ರಕಾರ ದೀಪಿಕಾ ಪಡುಕೋಣೆ ನನ್ನ ಪಾತ್ರವನ್ನು ನಿಭಾಯಿಸಬೇಕು. ಆಕೆ ಬ್ಯಾಡ್ಮಿಂಟನ್ ಆಡಿದ್ದಾರೆ ಮತ್ತು ಉತ್ತಮ ನಟಿಯೂ ಹೌದು. ಆದರೆ ಅಂತಿಮ ನಿರ್ಧಾರ ಸಿನೆಮಾ ತಯಾರಕರಿಗೆ ಬಿಟ್ಟಿದ್ದು ಎಂದು ಸಿಂಧು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ದೀಪಿಕಾ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ದೀಪಿಕಾ ಕಬೀರ್ ಖಾನ್ ನಿರ್ದೇಶನದ 83 ಸಿನೆಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಆಕೆ ತನ್ನ ಗಂಡ ರಣವೀರ್ ಸಿಂಗ್ ಜೊತೆ ನಟಿಸುತ್ತಿದ್ದಾರೆ. ಇದರ ಜೊತೆಗೆ ಮೇಘನಾ ಗುಲ್ಝಾರ್ ಅವರ ಚಪಾಕ್ ಚಿತ್ರದಲ್ಲಿ ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಪಾತ್ರ ನಿಭಾಯಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News