ಧರೆಗುರುಳಿದ ಸರ್ದಾರ್ ಪ್ರತಿಮೆ ಸಮೀಪದ 30 ಅಡಿ ಎತ್ತರದ ಡೈನಸಾರ್ ಪ್ರತಿಮೆ

Update: 2019-09-08 18:26 GMT

ಅಹ್ಮದಾಬಾದ್,ಸೆ.8: ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಸರ್ದಾರ್ ವಲ್ಲಭ ಬಾಯಿ ಪಟೇಲರ ಏಕತಾ ಪ್ರತಿಮೆಯ ಸಮೀಪ ನಿರ್ಮಿಸಲಾಗಿದ್ದ 30 ಅಡಿ ಎತ್ತರದ ಡೈನಸಾರ್ ಪ್ರತಿಮೆ ರವಿವಾರ ಕುಸಿದು ಬಿದ್ದಿದೆ. ಘಟನೆಯಲ್ಲಿ ಸಾವು-ನೋವುಗಳು ಸಂಭವಿಸಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಘಟನೆಯ ನಂತರ ಇಡೀ ಯೋಜನೆಯ ಮತ್ತು ಅದಕ್ಕೆ ಸಮ್ಮತಿ ಸೂಚಿಸಿದ ಗುತ್ತಿಗೆದಾರನ ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳು ಏಳಲಾರಂಭಿಸಿವೆ. ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಡೈನಸಾರ್ ಪ್ರತಿಮೆಯನ್ನು ಗುಜರಾತ್ ಸರಕಾರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ರಚಿಸಿತ್ತು. ಈ ಪ್ರತಿಮೆ ಸರ್ದಾರ್ ವಲ್ಲಭ ಬಾಯಿ ಪಟೇಲರ 182 ಮೀ. ಎತ್ತರದ ಪ್ರತಿಮೆಯ ಸಮೀಪವೇ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News