18 ತಿಂಗಳಲ್ಲಿ ಭಾರತಕ್ಕೆ ಎಸ್-400 ಕ್ಷಿಪಣಿಗಳ ರವಾನೆ: ರಶ್ಯ

Update: 2019-09-09 17:01 GMT

 ಮಾಸ್ಕೋ, ಸೆ. 9: ಭಾರತವು ಐದು ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ವೇಳಾಪಟ್ಟಿಗೆ ಅನುಗುಣವಾಗಿ ಪಡೆಯಲಿದೆ ಎಂದು ರಶ್ಯದ ಉಪಪ್ರಧಾನಿ ಯೂರಿ ಬೊರಿಸೊವ್ ರವಿವಾರ ಹೇಳಿದ್ದಾರೆ.

ಎಸ್-400 ಅತ್ಯಂತ ಸುಧಾರಿತ ದೀರ್ಘ ವ್ಯಾಪ್ತಿಯ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ. ಐದು ಎಸ್-400 ಕ್ಷಿಪಣಿಗಳ ಖರೀದಿಗಾಗಿ ಭಾರತವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಶ್ಯದೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು.

ಭಾರತಕ್ಕೆ ಎಸ್-400 ಕ್ಷಿಪಣಿಗಳನ್ನು ನೀಡುವ ಪ್ರಕ್ರಿಯೆಯು 2020ರ ಬಳಿಕ ಆರಂಭಗೊಳ್ಳುತ್ತದೆ ಹಾಗೂ ಹಣಪಾವತಿಗೆ ಸಂಬಂಧಿಸಿದ ವಿಷಯಗಳನ್ನು ಪರಿಹರಿಸಲಾಗಿದೆ ಎಂದು ರಶ್ಯದ ಫೆಡರಲ್ ಸರ್ವಿಸ್ ಫಾರ್ ಮಿಲಿಟರಿ ಟೆಕ್ನಿಕಲ್ ಕೋಪರೇಶನ್ ಈ ವರ್ಷದ ಜೂನ್‌ನಲ್ಲಿ ಹೇಳಿದೆ ಎಂದು ಸರಕಾರಿ ಒಡೆತನದ ಸುದ್ದಿ ಸಂಸ್ಥೆ ‘ಟಾಸ್ ವರದಿ ಮಾಡಿದೆ.

‘‘ಮುಂಗಡ ಪಾವತಿಯನ್ನು ಪಡೆಯಲಾಗಿದೆ ಹಾಗೂ ಎಲ್ಲ ಕ್ಷಿಪಣಿಗಳನ್ನು 18-19 ತಿಂಗಳಲ್ಲಿ ವೇಳಾಪಟ್ಟಿಗೆ ಅನುಗುಣವಾಗಿ ನೀಡಲಾಗುವುದು’’ ಎಂದು ಬೊರಿಸೊವ್ ಹೇಳಿದ್ದಾರೆ ಎಂದು ಸರಕಾರಿ ಒಡೆತನದ ಟಿವಿ ‘ರೋಸಿಯ-1’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News