ಬಾಂಗ್ಲಾ ವಿರುದ್ಧ ಏಕೈಕ ಟೆಸ್ಟ್‌ ಜಯಿಸಿದ ಅಫ್ಘಾನಿಸ್ತಾನ

Update: 2019-09-09 18:16 GMT

ಚಿತ್ತಗಾಂಗ್, ಸೆ.9: ಇಲ್ಲಿ ನಡೆದ ಏಕೈಕ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಅಫ್ಘಾನಿಸ್ತಾನ 224 ರನ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದೆ.

 ಟೆಸ್ಟ್‌ನ ಐದನೇ ಹಾಗೂ ಅಂತಿಮ ದಿನವಾಗಿರುವ ಸೋಮವಾರ ಗೆಲುವಿಗೆ ಎರಡನೇ ಇನಿಂಗ್ ್ಸನಲ್ಲಿ 398 ರನ್‌ಗಳ ಸವಾಲನ್ನು ಪಡೆದ ಬಾಂಗ್ಲಾದೇಶ ತಂಡ 61.4 ಓವರ್‌ಗಳಲ್ಲಿ 173 ರನ್ ಗಳಿಸುವ ಮೂಲಕ ಸೋಲು ಅನುಭವಿಸಿತು.

ನಾಲ್ಕನೇ ದಿನದಾಟದಂತ್ಯಕ್ಕೆ 44.2 ಓವರ್‌ಗಳಲ್ಲಿ 136 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಬಾಂಗ್ಲಾದೇಶ ಈ ಮೊತ್ತಕ್ಕೆ 37 ರನ್ ಗಳಿಸಲಷ್ಟೇ ಶಕ್ತವಾಗಿದೆ. ನೂತನ ನಾಯಕ ರಶೀದ್ ಖಾನ್(49ಕ್ಕೆ 6), ಝಹೀರ್ ಖಾನ್(59ಕ್ಕೆ 3) ಮತ್ತು ನಿವೃತ್ತಿಯ ಹಾದಿಯಲ್ಲಿರುವ ಮುಹಮ್ಮದ್ ನಬಿ (39ಕ್ಕೆ 1) ಶಿಸ್ತುಬದ್ಧ ದಾಳಿಯ ನೆರವಿನಲ್ಲಿ ಅಫ್ಘಾನಿಸ್ತಾನ ತಂಡ ಗೆಲುವಿನ ನಗೆ ಬೀರಿದೆ. ಅದರಲ್ಲೂ ಮುಖ್ಯವಾಗಿ ನಾಯಕ ರಶೀದ್ ಖಾನ್ ಇಂದು ಮೂರು ವಿಕೆಟ್‌ನ್ನು ಉಡಾಯಿಸಿದರು. ನಿನ್ನೆ ದಿನದಾಟದಂತ್ಯಕ್ಕೆ 39 ರನ್ ಗಳಿಸಿ ಔಟಾಗದೆ ಉಳಿದಿದ್ದ ನಾಯಕ ಶಾಕೀಬ್ ಅಲ್ ಹಸನ್‌ಈ ಮೊತ್ತಕ್ಕೆ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾದರು. ಇವರೊಂದಿಗೆ ಖಾತೆ ತೆರೆಯದೆ ಕ್ರೀಸ್‌ನಲ್ಲಿದ್ದ ಸೌಮ್ಯ ಸರ್ಕಾರ್ (15) ಮತ್ತು ಮೆಹಿದಿ ಹಸನ್(12) ಎರಡಂಕೆಯ ಸ್ಕೋರ್ ಜಮೆ ಮಾಡಿ ಹೋರಾಟ ನಡೆಸಿದರೂ ಫಲಕಾರಿಯಾಗಲಿಲ್ಲ.

ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯದ ದಾಖಲೆಯನ್ನು ಸರಿಗಟ್ಟಿದೆ. ಅಫ್ಘಾನಿಸ್ತಾನ ಆಡಿರುವ ಮೂರು ಪಂದ್ಯಗಳ ಪೈಕಿ 2ರಲ್ಲಿ ಜಯ ಗಳಿಸಿಸದೆ. ಆಸ್ಟ್ರೇಲಿಯ ಮೊದಲು ಆಡಿದ್ದ 3 ಪಂದ್ಯಗಳಲ್ಲಿ 2 ಜಯ ಗಳಿಸಿತ್ತು. ಇಂಗ್ಲೆಂಡ್ ಆಡಿದ್ದ 4 ಟೆಸ್ಟ್‌ಗಳಲ್ಲಿ 2 ಗೆಲುವು, ಪಾಕಿಸ್ತಾನ 9ರಲ್ಲಿ 2 ಗೆಲುವು, ಭಾರತ 30ರಲ್ಲಿ 2, ನ್ಯೂಝಿಲ್ಯಾಂಡ್ ಆಡಿದ 55 ಪಂದ್ಯಗಲ್ಲಿ ಜಯ ದಾಖಲಿಸಿತ್ತು. ಬಾಂಗ್ಲಾ ಈ ವಿಚಾರದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. 60ಟೆಸ್ಟ್‌ಗಳಲ್ಲಿ 2ನೇ ಜಯ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್

► ಅಫ್ಘಾನಿಸ್ತಾನ ಮೊದಲ ಇನಿಂಗ್ಸ್ 342

► ಬಾಂಗ್ಲಾ ಮೊದಲ ಇನಿಂಗ್ಸ್ 205

► ಅಫ್ಘಾನಿಸ್ತಾನ ಎರಡನೇ ಇನಿಂಗ್ಸ್ 90.1 ಓವರ್‌ಗಳಲ್ಲಿ ಆಲೌಟ್ 260 (ಝದ್ರಾನ್ 87,ಅಫ್ಘಾನ್ 50,ಅಫ್ಸಾರ್ ಝಝಾಯ್ ಔಟಾಗದೆ 48;ಶಾಕೀಬ್ ಅಲ್ ಹಸನ್ 58ಕ್ಕೆ 3, ಮೆಹದಿ ಹಸನ್ 35ಕ್ಕೆ 2, ತೈಜುಲ್ 86ಕ್ಕೆ 2, ನಯೀಮ್ 61ಕ್ಕೆ 2).

► ಬಾಂಗ್ಲಾದೇಶ ಎರಡನೇ ಇನಿಂಗ್ಸ್ 61.4 ಓವರ್‌ಗಳಲ್ಲಿ ಆಲೌಟ್ 173

 (ಶಾಕೀಬ್ 44, ಶಾದ್ಮನ್‌ಇಸ್ಲಾಂ 41, ; ರಶೀದ್ ಖಾನ್ 49ಕ್ಕೆ 6, ಝಹೀರ್ ಖಾನ್ 59ಕ್ಕೆ 3).

► ಪಂದ್ಯಶ್ರೇಷ್ಠ : ರಶೀದ್ ಖಾನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News