ಅಮೆರಿಕಾದ 'ಮೂನ್ ಮಿಷನ್' ಯಶಸ್ವಿಗೆ ಏಕಾದಶಿ ಕಾರಣ: ಮಾಜಿ ಆರೆಸ್ಸೆಸ್ಸಿಗ ಸಂಭಾಜಿ ಭಿಡೆ

Update: 2019-09-10 07:46 GMT

ಪುಣೆ, ಸೆ.10: ಅಮೆರಿಕಾದ ಬಾಹ್ಯಾಕಾಶ ವಿಜ್ಞಾನಿಗಳು ತಮ್ಮ 39ನೇ ಪ್ರಯತ್ನದಲ್ಲಿ ತಮ್ಮ ಉಪಗ್ರಹವನ್ನು ಚಂದ್ರನಲ್ಲಿಗೆ ಕೊಂಡು ಹೋಗಲು ಅವರು ಏಕಾದಶಿಯಂದು ತಮ್ಮ ಉಪಗ್ರಹ ಉಡಾವಣೆ ನಡೆಸಿದ್ದೇ ಕಾರಣ ಎಂದು ಮಾಜಿ ಆರೆಸ್ಸೆಸ್ಸಿಗ, ಸಂಭಾಜಿ ಭಿಡೆ ಹೇಳಿದ್ದಾರೆ. ಭಾರತದ ಚಂದ್ರಯಾನ-2 ಮಿಷನ್ ಇನ್ನೇನು ಯಶಸ್ವಿಯಾಗಲಿದೆ ಎನ್ನುವಾಗ ಕೊನೇ ಕ್ಷಣದಲ್ಲಿ ಲ್ಯಾಂಡರ್ ವಿಕ್ರಮ್  ಜತೆ ಸಂಪರ್ಕ ಕಳೆದುಕೊಂಡ ನಂತರ ಭಿಡೆ ಅವರ ಈ ಹೇಳಿಕೆ ಬಂದಿದೆ.

ಮಹಾರಾಷ್ಟ್ರದ ಶಿವ ಪ್ರತಿಷ್ಠಾನ್ ಹಿಂದುಸ್ತಾನ್ ಅಧ್ಯಕ್ಷರಾಗಿರುವ ಭಿಡೆ ಜನವರಿ 2018ರಲ್ಲಿ ನಡೆದ ಕೋರೆಗಾಂವ್-ಭೀಮಾ ಹಿಂಸಾಚಾರ ಪ್ರಕರಣದಲ್ಲಿ ಆರೋಪಿ.

“ಅಮೆರಿಕಾದ ಮೂನ್ ಮಿಷನ್ 38 ಬಾರಿ ವಿಫಲವಾದಾಗ ಅಲ್ಲಿನ ವಿಜ್ಞಾನಿಯೊಬ್ಬರು ಅಲ್ಲಿನವರು ಅನುಸರಿಸುವ ಸಮಯ ಪದ್ಧತಿ  ಬದಲು ಭಾರತೀಯ ಸಮಯ ಪದ್ಧತಿ ಅನುಸರಿಸುವಂತೆ ಸಲಹೆ ನೀಡಿದ್ದರು. ಅಂತೆಯೇ ಏಕಾದಶಿಯಂದು ನಡೆಸಲಾದ 39ನೇ ಪ್ರಯತ್ನ ಯಶಸ್ವಿಯಾಗಿತ್ತು'' ಎಂದು ಸೋಲಾಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News