ಭೀಮಾ ಕೋರೆಗಾಂವ್ ಪ್ರಕರಣ: ದಿಲ್ಲಿ ವಿವಿ ಪ್ರೊಫೆಸರ್ ನಿವಾಸದಲ್ಲಿ ಶೋಧ

Update: 2019-09-10 13:32 GMT

ಹೊಸದಿಲ್ಲಿ, ಸೆ.10: ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ದಿಲ್ಲಿ ವಿವಿ ಪ್ರೊಫೆಸರ್ ಹ್ಯಾನಿ ಬಾಬು ಅವರ ನಿವಾಸದಲ್ಲಿ ಪುಣೆ ಪೊಲೀಸರು ಮಂಗಳವಾರ ಎಲ್ಗಾರ್ ಪರಿಷದ್‍ ಗೆ ಸಂಬಂಧಿಸಿದ ಭೀಮಾ ಕೋರೆಗಾಂವ್  ಪ್ರಕರಣ ಕುರಿತಂತೆ ಶೋಧ ನಡೆಸಿದ್ದಾರೆ. ಆದರೆ ಇಲ್ಲಿಯ ತನಕ ಬಾಬು ಅವರನ್ನು ಬಂಧಿಸಲಾಗಿಲ್ಲ.

ದಿಲ್ಲಿ ವಿವಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ 45 ವರ್ಷದ ಬಾಬು ಅವರ ನಿವಾಸದಿಂದ ಇಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಬು ನಿವಾಸದ ಶೋಧ ಕಾರ್ಯಾಚರಣೆಯ ವೀಡಿಯೋ ಚಿತ್ರೀಕರಣವನ್ನೂ ಪೊಲೀಸರು ನಡೆಸಿದ್ದಾರೆ.

ಘಟನೆ ಬಗ್ಗೆ ಫೇಸ್ ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ ಬಾಬು ಅವರ ಪತ್ನಿ ಜೆನ್ನಿ ರೊವೆನಾ, ಪೊಲೀಸರು ಬೆಳಗ್ಗೆ 6:30ಕ್ಕೆ ಮನೆಗೆ ಬಂದು ಬಾಬು ಅವರು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ  ಶಾಮೀಲಾಗಿದ್ದಾರೆಂದು ಆರೋಪಿಸಿ  ಸರ್ಚ್ ವಾರಂಟ್ ಇಲ್ಲದೆಯೇ ಆರು ಗಂಟೆಗಳ ಶೋಧ ನಡೆಸಿ ಮೂರು ಪುಸ್ತಕಗಳು, ಲ್ಯಾಪ್ ಟಾಪ್, ಫೋನ್, ಹಾರ್ಡ್ ಡಿಸ್ಕ್,  ಪೆನ್ ಡ್ರೈವ್ ಗಳನ್ನು ಕೊಂಡು ಹೋಗಿದ್ದಾರೆ ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News