ಆಫ್ರಿಕಾದ ಬಡವರಿಗಾಗಿ 50 ಮಿ. ಡಾಲರ್ ಕಾದಾಟಕ್ಕೆ ಖಬೀಬ್ ನೂರ್ ಮೊಹಮದೋವ್ ಸಜ್ಜು

Update: 2019-09-10 16:10 GMT

ವಿಶ್ವಪ್ರಸಿದ್ಧ ಯುಎಫ್ ಸಿ ಫೈಟರ್ ಖಬೀಬ್ ನೂರ್ ಮೊಹಮದೋವ್ ಅವರು ಈ ಬಾರಿ ಆಫ್ರಿಕಾದ ಬಡವರಿಗಾಗಿ 50 ಮಿಲಿಯನ್ ಡಾಲರ್ ಸಂಗ್ರಹಿಸಲು ಪಂದ್ಯಕ್ಕೆ ಮುಂದಾಗಿದ್ದಾರೆ.

ಒಂದು ವೇಳೆ ಎಲ್ಲವೂ ಸರಿಯಾಗಿ ನಡೆದರೆ ಖಬೀಬ್ ವಿರುದ್ಧ ಈ ಬಾರಿ ಮತ್ತೊಬ್ಬ ಜಗತ್ಪ್ರಸಿದ್ಧ ಫೈಟರ್ ಕಾನರ್ ಮೆಕ್ ಗ್ರೊಗೊರ್ ಕಾದಾಡಲಿದ್ದಾರೆ. ಕಳೆದ ಸಲ ನಡೆದ ಪಂದ್ಯದಲ್ಲಿ ಖಬೀಬ್ ಮೆಕ್ ಗ್ರೆಗೊರ್ ರನ್ನು ಮಣಿಸಿ ಎಲ್ಲರ ಹುಬ್ಬೇರಿಸಿದ್ದರು.

ಶನಿವಾರ ನಡೆದ ಪಂದ್ಯದಲ್ಲಿ ಖಬೀಬ್ ಅವರು ಡಸ್ಟಿನ್ ಪೈರೀರ್ ರನ್ನು ಮಣಿಸಿದ್ದರು. “ಕುಡಿಯಲು ನೀರು ಸಹ ಸಿಗದ ಆಫ್ರಿಕಾದ ಬಡವರಿಗಾಗಿ ನಾನು ಚಾರಿಟಿ ಪಂದ್ಯವೊಂದಕ್ಕೆ ಮುಂದಾಗಿದ್ದೇನೆ. ಇದಕ್ಕೆ ಯುಎಫ್ ಸಿ ಬೆಂಬಲ ಬೇಕಾಗಿದೆ. ನಾವು 50 ಮಿಲಿಯನ್ ಅಥವಾ 40 ಅಥವಾ 30 ಮಿಲಿಯನ್ ಡಾಲರ್ ಸಂಗ್ರಹಿಸಿದರೂ ಈ ದೇಶಗಳಲ್ಲಿ ದಾನಕ್ಕೆ ನೆರವಾಗಲಿದೆ. ನಾವು ಪ್ರಸಿದ್ಧರು ಹಾಗು ನಮ್ಮ ಬಳಿ ಸಾಕಷ್ಟು ಹಣವಿದೆ. ಆದರೆ ನಾವು ವಿನಮ್ರರಾಗಿರಬೇಕು” ಎಂದವರು ಹೇಳಿದ್ದಾರೆ.

ಈ ಬಗ್ಗೆ ಯುಎಫ್ ಸಿಯ ಮುಖ್ಯಸ್ಥ ದಾನ ವೈಟ್ ಯಾವುದೇ ಹೇಳಿಕೆ ನೀಡಿಲ್ಲವಾದರೂ ಖಬೀಬ್ ವಿರುದ್ಧ ಕಣಕ್ಕಿಳಿಯಲಿರುವವರು ಕಾನರ್ ಮೆಕ್ ಗ್ರೊಗರ್ ಎನ್ನುವ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News