ಜೋರ್ಡಾನ್ ಕಣಿವೆ ವಶ: ಇಸ್ರೇಲ್ ಪ್ರಧಾನಿ ಹೇಳಿಕೆ ಖಂಡಿಸಿದ ಸೌದಿ

Update: 2019-09-11 16:42 GMT

ರಿಯಾದ್, ಸೆ. 11: ತಾನು ಪುನರಾಯ್ಕೆಯಾದರೆ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಜೋರ್ಡಾನ್ ಕಣಿವೆಯನ್ನು ಇಸ್ರೇಲ್ ಜೊತೆಗೆ ಸೇರಿಸಿಕೊಳ್ಳುವುದಾಗಿ ಆ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಸೌದಿ ಅರೇಬಿಯ ಬುಧವಾರ ಹೇಳಿದೆ.

‘‘ಇಸ್ರೇಲ್ ಪ್ರಧಾನಿಯ ಈ ಹೇಳಿಕೆಯನ್ನು ಸೌದಿ ಅರೇಬಿಯ ಖಂಡಿಸುತ್ತದೆ ಹಾಗೂ ಸ್ಪಷ್ಟವಾಗಿ ತಿರಸ್ಕರಿಸುತ್ತದೆ’’ ಎಂದು ರಾಜ ಆಸ್ಥಾನವನ್ನು ಉಲ್ಲೇಖಿಸಿ ಅಧಿಕೃತ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

‘‘ಈ ಘೋಷಣೆಯು ಫೆಲೆಸ್ತೀನ್ ಜನತೆಯ ವಿರುದ್ಧದ ಅತ್ಯಂತ ಅಪಾಯಕಾರಿ ಆಕ್ರಮಣವಾಗಿದೆ ಹಾಗೂ ವಿಶ್ವಸಂಸ್ಥೆಯ ಸನ್ನದು ಮತ್ತು ಅಂತರ್‌ರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಸೌದಿ ಅರೇಬಿಯ ಭಾವಿಸುತ್ತದೆ’’ ಎಂದು ಏಜನ್ಸಿ ಹೇಳಿದೆ.

ಸೆಪ್ಟಂಬರ್ 17ರಂದು ಇಸ್ರೇಲ್‌ನಲ್ಲಿ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನೆತನ್ಯಾಹು ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News