ಟ್ಯಾಂಕರ್‌ನ ತೈಲವನ್ನು ಸಿರಿಯಕ್ಕೆ ಸಾಗಿಸಿದ ಇರಾನ್: ಬ್ರಿಟನ್ ಆರೋಪ

Update: 2019-09-11 16:44 GMT

ಲಂಡನ್, ಸೆ. 11: ತೈಲ ಟ್ಯಾಂಕರ್ ‘ಅಡ್ರಿಯನ್ ಡಾರ್ಯ 1’ರಲ್ಲಿದ್ದ ತೈಲವನ್ನು ಇರಾನ್ ಸಿರಿಯಕ್ಕೆ ಮಾರಾಟ ಮಾಡಿದೆ ಹಾಗೂ ಆ ಮೂಲಕ ತನಗೆ ನೀಡಿದ್ದ ಭರವಸೆಯನ್ನು ಅದು ಮುರಿದಿದೆ ಎಂದು ಬ್ರಿಟನ್ ಆರೋಪಿಸಿದೆ.

ಇರಾನ್‌ನ ತೈಲ ಟ್ಯಾಂಕರ್ ಐರೋಪ್ಯ ಒಕ್ಕೂಟದ ದಿಗ್ಬಂಧನವನ್ನು ಉಲ್ಲಂಘಿಸಿ ಸಿರಿಯಕ್ಕೆ ತೈಲ ಸಾಗಿಸುತ್ತಿದೆ ಎಂಬ ಸಂಶಯದಲ್ಲಿ ಬ್ರಿಟನ್ ಆಡಳಿತಕ್ಕೆ ಒಳಪಟ್ಟ ಜಿಬ್ರಾಲ್ಟರ್‌ನಲ್ಲಿ ಅದನ್ನು ಜುಲೈ 4ರಂದು ತಡೆಹಿಡಿಯಲಾಗಿತ್ತು. ಟ್ಯಾಂಕರ್‌ನಲ್ಲಿರುವ 21 ಲಕ್ಷ ಬ್ಯಾರಲ್ ತೈಲವನ್ನು ಸಿರಿಯದಲ್ಲಿ ಇಳಿಸುವುದಿಲ್ಲ ಎಂಬ ಇರಾನ್‌ನ ಲಿಖಿತ ಭರವಸೆಯ ಮೇಲೆ ಅದನ್ನು ಆಗಸ್ಟ್ 15ರಂದು ಬಿಡುಗಡೆ ಮಾಡಲಾಗಿತ್ತು.

ಆದರೆ, ಆ ತೈಲವನ್ನು ಇರಾನ್ ಸಿರಿಯಕ್ಕೆ ಸಾಗಿಸಿರುವುದು ಖಚಿತವಾಗಿದೆ ಹಾಗೂ ಆ ಮೂಲಕ ಅದು ತನ್ನ ಭರವಸೆಯನ್ನು ಮುರಿದಿದೆ ಎಂದು ಬ್ರಿಟನ್‌ನ ವಿದೇಶ ಕಚೇರಿ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News