ಟ್ರಂಪ್ ಜನಪ್ರಿಯತೆ ಮಟ್ಟದಲ್ಲಿ ಕುಸಿತ

Update: 2019-09-11 17:11 GMT

ವಾಶಿಂಗ್ಟನ್, ಸೆ. 11: ಆರ್ಥಿಕ ಹಿಂಜರಿತದ ಬಗ್ಗೆ ಅಮೆರಿಕದಲ್ಲಿ ಕಳವಳ ಹೆಚ್ಚುತ್ತಿರುವಂತೆಯೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಜನಪ್ರಿಯತೆ ಮಟ್ಟದಲ್ಲಿ ತೀವ್ರ ಕುಸಿತವಾಗಿದೆ ಎಂದು ಮಂಗಳವಾರ ಪ್ರಕಟಗೊಂಡ ವಾಶಿಂಗ್ಟನ್ ಪೋಸ್ಟ್/ಎಬಿಸಿ ಸಮೀಕ್ಷೆ ತಿಳಿಸಿದೆ.

ಟ್ರಂಪ್‌ರ ಜನಪ್ರಿಯತೆ ಮಟ್ಟ ಜುಲೈ ತಿಂಗಳಲ್ಲಿ ಸರ್ವಾಧಿಕ 44 ಶೇಕಡ ಆಗಿತ್ತು. ಅದು ಈಗ 38 ಶೇಕಡಕ್ಕೆ ಇಳಿದಿದೆ.

ಉದ್ಯೋಗ ಸೃಷ್ಟಿಯಲ್ಲಿ ಡೊನಾಲ್ಡ್ ಟ್ರಂಪ್‌ರ ನಿರ್ವಹಣೆಯನ್ನು 10 ಅಮೆರಿಕನ್ನರಲ್ಲಿ 6 ಮಂದಿ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News