ಗಾಝಾ ಮೇಲೆ ಇಸ್ರೇಲ್ ವಿಮಾನಗಳಿಂದ ದಾಳಿ: ಸೈರನ್ ಕೇಳಿ ಭಾಷಣ ನಿಲ್ಲಿಸಿ ಓಡಿದ ಪ್ರಧಾನಿ ನೆತನ್ಯಾಹು

Update: 2019-09-11 17:13 GMT

ಗಾಝಾ, ಸೆ. 11: ಫೆಲೆಸ್ತೀನ್‌ನ ಗಾಝಾ ನಗರದಿಂದ ಇಸ್ರೇಲ್‌ ನತ್ತ ರಾಕೆಟ್‌ಗಳು ಹಾರಿದ ಗಂಟೆಗಳ ಬಳಿಕ, ಇಸ್ರೇಲ್ ಯುದ್ಧ ವಿಮಾನಗಳು ಬುಧವಾರ ಗಾಝಾ ಮೇಲೆ ವಾಯು ದಾಳಿ ನಡೆಸಿವೆ.

ಶಸ್ತ್ರ ತಯಾರಿಕಾ ಘಟಕ, ಬಂಡುಕೋರರು ಬಳಸುವ ನೌಕಾ ಪಡೆ ಆವರಣ ಮತ್ತು ಹಮಾಸ್‌ಗೆ ಸೇರಿದ ಸುರಂಗಗಳು ಸೇರಿದಂತೆ 15 ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ದಾಳಿಯಲ್ಲಿ ಸಂಭವಿಸಿರಬಹುದಾದ ಸಾವು-ನೋವುಗಳ ಬಗ್ಗೆ ವರದಿಯಗಿಲ್ಲ.

ಇದಕ್ಕೂ ಮುನ್ನ, ಮಂಗಳವಾರ ಸಂಜೆ ಇಸ್ರೇಲ್‌ನ ದಕ್ಷಿಣದ ನಗರ ಅಶ್ಡೋಡ್‌ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ ರಾಕೆಟ್ ದಾಳಿಯ ಬಗ್ಗೆ ಎಚ್ಚರಿಕೆ ನೀಡುವ ಸೈರನ್‌ಗಳು ಮೊಳಗಿದವು. ಅಂಗರಕ್ಷಕರು ತಕ್ಷಣ ಅವರನ್ನು ಸುರಕ್ಷಿತ ಸ್ಥಳವೊಂದಕ್ಕೆ ಕರೆದೊಯ್ದರು.

ಹಲವು ನಿಮಿಷಗಳ ಬಳಿಕ ನೆತನ್ಯಾಹು ತನ್ನ ಭಾಷಣವನ್ನು ಮುಂದುವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News