ಅಮಿತ್ ಪ್ರಿ-ಕ್ವಾರ್ಟರ್ ಫೈನಲ್‌ಗೆ

Update: 2019-09-14 18:31 GMT

ಎಕಟೆರಿನ್‌ಬರ್ಗ್(ರಶ್ಯ), ಸೆ.14: ಏಶ್ಯನ್ ಚಾಂಪಿಯನ್ ಅಮಿತ್ ಪಾಂಘಾಲ್(57ಕೆಜಿ)ಚೈನೀಸ್ ತೈಪೆಯ ಟು ಪೊ-ವೀ ಅವರನ್ನು ಮಣಿಸುವುದರೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಅಭಿಯಾನ ಆರಂಭಿಸಿದರು.

ಮೊದಲ ಸುತ್ತಿನಲ್ಲಿ ಬೈ ಪಡೆದಿರುವ ಪಾಂಘಾಲ್ ಶನಿವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಟು ಪೊ-ವೀ ಅವರನ್ನು 5-0 ಸೆಟ್‌ಗಳ ಅಂತರದಿಂದ ಸೋಲಿಸುವುರೊಂದಿಗೆ ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

23ರ ಹರೆಯದ ಅಮಿತ್ ಹ್ಯಾಂಬರ್ಗ್‌ನಲ್ಲಿ ನಡೆದ ಕಳೆದ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಮಿತ್ ಕ್ವಾರ್ಟರ್ ಫೈನಲ್‌ನಲ್ಲಿ ಹಸನ್‌ಬಾಯ್ ಡಸ್ಮಟೊವ್ ವಿರುದ್ಧ ಸೋತಿದ್ದರು. ಎರಡನೇ ಶ್ರೇಯಾಂಕದ ಅಮಿತ್ ತೂಕ ವಿಭಾಗವನ್ನು 49ರಿಂದ 52 ಕೆಜಿಗೆ ಬದಲಾಯಿಸಿದ್ದರೂ ಅವರ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ.ಕಳೆದ ವರ್ಷ 52ಕೆಜಿಗೆ ತೂಕ ವಿಭಾಗವನ್ನು ಬದಲಾಯಿಸಿದ ಕೆಲವೇ ತಿಂಗಳ ಬಳಿಕ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಕಳೆದ ವರ್ಷ 52ಕೆಜಿಗೆ ತೂಕ ವಿಭಾಗವನ್ನು ಬದಲಾಯಿಸಿದ ಕೆಲವೇ ತಿಂಗಳ ಬಳಿಕ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News