‘ದ ಗಾರ್ಡಿಯನ್’ ನ ಅತ್ಯುತ್ತಮ 100 ಚಲನಚಿತ್ರಗಳಲ್ಲಿರುವ ಭಾರತದ ಏಕೈಕ ಚಿತ್ರ ಯಾವುದು ಗೊತ್ತಾ?

Update: 2019-09-15 17:14 GMT

‘ದ ಗಾರ್ಡಿಯನ್’ನ 21ನೆ ಶತಮಾನದ ವಿಶ್ವದ ಅತ್ಯುತ್ತಮ 100 ಚಲನಚಿತ್ರಗಳಲ್ಲಿ ಭಾರತದ ಏಕೈಕ ಚಿತ್ರ ಸ್ಥಾನ ಪಡೆದಿದೆ.

ವಿಮರ್ಶಕರಿಂದಲೂ, ಸಾಮಾನ್ಯ ಪ್ರೇಕ್ಷಕರಿಂದಲೂ ಮೆಚ್ಚುಗೆ ಗಳಿಸಿ ಬ್ಲಾಕ್ ಬಸ್ಟರ್ ಆದ, ಗ್ಯಾಂಗ್ ಸ್ಟರ್ ಚಿತ್ರ, ಅನುರಾಗ್ ಕಶ್ಯಪ್ ನಿರ್ದೇಶನದ ‘ಗ್ಯಾಂಗ್ಸ್ ಆಫ್ ವಸ್ಸೇಪುರ್’ ಈ ಪ್ರತಿಷ್ಟಿತ ಪಟ್ಟಿಯಲ್ಲಿ ಸ್ಥಾನ ಪಡೆದ ಚಿತ್ರವಾಗಿದೆ.

ಈ ಪಟ್ಟಿಯ 59 ಸ್ಥಾನದಲ್ಲಿ ‘ಗ್ಯಾಂಗ್ಸ್ ಆಫ್ ವಸ್ಸೇಪುರ್’ ಇದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅನುರಾಗ್ ಕಶ್ಯಪ್, “ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ದ ಡಾರ್ಕ್ ನೈಟ್’ (98ನೆ ಸ್ಥಾನ) ಸೇರಿ ಹಲವು ಚಿತ್ರಗಳು ತನ್ನ ಚಿತ್ರಕ್ಕಿಂತ ಮೇಲಿನ ಸ್ಥಾನದಲ್ಲಿರಬೇಕಿತ್ತು” ಎಂದಿದ್ದಾರೆ.

ಈ ಪಟ್ಟಿಯಲ್ಲಿ 2007ರಲ್ಲಿ ಬಿಡುಗಡೆಯಾದ, ಪೌಲ್ ಥೋಮಸ್ ಆಂಡರ್ ಸನ್ ರ ‘ದೇರ್ ವಿಲ್ ಬಿ ಬ್ಲಡ್’ ಮೊದಲ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News