ಆಗಸ್ಟ್‌ ನಲ್ಲಿ ಸಗಟುದರ ಹಣದುಬ್ಬರ ದರ ಶೇ.1.08ರಲ್ಲಿ ಸ್ಥಿರ

Update: 2019-09-16 16:46 GMT

ಹೊಸದಿಲ್ಲಿ, ಸೆ.16: ಆಗಸ್ಟ್‌ನಲ್ಲಿ ಸಗಟು ದರ ಹಣದುಬ್ಬರ ಕಳೆದ ತಿಂಗಳಿನಷ್ಟೇ ಇದ್ದು ಯಾವುದೇ ಬದಲಾವಣೆಯಾಗದೆ ಶೇ.1.08ರಲ್ಲೇ ಸ್ಥಿರವಾಗಿದೆ ಎಂದು ಸರಕಾರ ಸೋಮವಾರ ಬಿಡುಗಡೆಗೊಳಿಸಿದ ಅಂಕಿ ಅಂಶದ ವರದಿ ತಿಳಿಸಿದೆ.

ಪ್ರಮುಖ ವಸ್ತುಗಳ ಸಗಟುದರ ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ.6.43ರಷ್ಟು ಹೆಚ್ಚಳವಾಗಿದೆ. ಆಹಾರ ವಸ್ತುಗಳ ಸಗಟು ದರ ಶೇ.7.67ರಷ್ಟು ಹೆಚ್ಚಾಗಿದ್ದು(ಜುಲೈಯಲ್ಲಿ ಶೇ.6.15 ಹೆಚ್ಚಳ) ಇದಕ್ಕೆ ತರಕಾರಿ ದರದಲ್ಲಿ ಆಗಿರುವ ಏರಿಕೆ ಪ್ರಮುಖ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

 ಆಹಾರ ವಸ್ತುಗಳಲ್ಲಿ ಈರುಳ್ಳಿ ದರದಲ್ಲಿ ಶೇ.33.01ರಷ್ಟು ಏರಿಕೆಯಾಗಿದ್ದರೆ, ಬಟಾಟೆಯ ದರದಲ್ಲಿ ಶೇ.21.28ರಷ್ಟು ಇಳಿಕೆಯಾಗಿದೆ. ತರಕಾರಿ ದರ ಶೇ.13.07ರಷ್ಟು ಏರಿಕೆಯಾಗಿದೆ.

ಇಂಧನ ಮತ್ತು ಶಕ್ತಿ ವಿಭಾಗದಲ್ಲಿ ದರ ಶೇ.4ರಷ್ಟು ಇಳಿಕೆಯಾಗಿದ್ದರೆ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ದರದಲ್ಲಿ ಶೇ.27.94ರಷ್ಟು ಇಳಿಕೆಯಾಗಿದೆ. ಪೆಟ್ರೋಲ್‌ನ ಸಗಟು ದರ ಶೇ.5.55ರಲ್ಲಿ ಇಳಿಕೆಯಾಗಿದ್ದರೆ ಹೈಸ್ಪೀಡ್ ಡೀಸೆಲ್ ದರ ಶೇ.3.51 ಇಳಿಕೆಯಾಗಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ, ತಯಾರಿಸಿದ ಉತ್ಪನ್ನಗಳ ಸಗಟು ದರದಲ್ಲಿ ಬದಲಾವಣೆಯಾಗಿಲ್ಲ ಎಂದು ಅಂಕಿಅಂಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News