ಹಲವು ಭಾಷೆಗಳ ಅಸ್ತಿತ್ವ ಭಾರತದ ದುರ್ಬಲತೆ ಅಲ್ಲ: ರಾಹುಲ್ ಗಾಂಧಿ

Update: 2019-09-17 16:39 GMT

ಹೊಸದಿಲ್ಲಿ, ಸೆ. 17: ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶಕ್ಕೆ ಏಕ ಭಾಷೆಯಾಗಿ ಹಿಂದಿ ಘೋಷಿಸಿದ ದಿನಗಳ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಲವು ಭಾಷೆಗಳ ಅಸ್ತಿತ್ವ ಭಾರತದ ದುರ್ಬಲತೆ ಅಲ್ಲ ಎಂದು ಮಂಗಳವಾರ ಹೇಳಿದ್ದಾರೆ. ‘‘ಭಾರತದಲ್ಲಿ ಹಲವು ಭಾಷೆಗಳು ಅಸ್ತಿತ್ವದಲ್ಲಿ ಇರುವುದು ಅದರ ದುರ್ಬಲತೆ ಅಲ್ಲ’’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ ಹಾಗೂ 23 ಭಾರತೀಯ ಭಾಷೆಗಳ ಪಟ್ಟಿ ನೀಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ, ಹಿಂದಿ ಭಾರತದ ಅಧಿಕೃತ ಭಾಷೆ. ಅದು ಬೆಳವಣಿಗೆಯಾಗಲು ನಾವು ಬಯಸುತ್ತೇವೆ. ಆದರೆ, ಅದರೊಂದಿಗೆ ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಕೂಡ ಉತ್ತೇಜನ ನೀಡಬೇಕು ಎಂದರು. ಭಾಷೆಗಳ ನಡುವೆ ಹೋರಾಟ ಇರಬಾರದು ಎಂದು ಅವರು ತಿಳಿಸಿದರು. ‘‘ಹಿಂದಿ ನಿರಂತರ ಬೆಳವಣಿಗೆಯಾಗಬೇಕು. ಇದನ್ನೇ ನಾವು ಬಯಸುತ್ತಿರುವುದು. ಆದರೆ, ಅದಕ್ಕಾಗಿ ಒತ್ತಡ ಹೇರಬಾರದು. ಮತಕ್ಕಾಗಿ ಮಾತ್ರ ಈ ವಿಷಯವನ್ನು ಬಳಸಿಕೊಳ್ಳುವುದು ಸರಿಯಲ್ಲ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News