6 ಕೋಟಿ ಪಿಎಫ್ ಚಂದಾದಾರರಿಗೆ ಶುಭ ಸುದ್ದಿ

Update: 2019-09-17 15:42 GMT

ಹೊಸದಿಲ್ಲಿ,ಸೆ.17: ನೌಕರರ ಭವಿಷ್ಯನಿಧಿ ಸಂಸ್ಥೆ (ಇಪಿಎಫ್‌ಒ)ಯ ಆರು ಕೋಟಿಗೂ ಅಧಿಕ ಚಂದಾದಾರರು 2018-19ನೇ ಹಣಕಾಸು ವರ್ಷಕ್ಕೆ ತಮ್ಮ ಠೇವಣಿಗಳ ಮೇಲೆ ವಾರ್ಷಿಕ ಶೇ.8.65ರಷ್ಟು ಬಡ್ಡಿಯನ್ನು ಪಡೆಯಲಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರು ಮಂಗಳವಾರ ಇಲ್ಲಿ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇಪಿಎಫ್‌ಒ ಕೇಂದ್ರ ವಿಶ್ವಸ್ತ ಮಂಡಳಿಯು ಕಳೆದ ಜನವರಿಯಲ್ಲಿ 2018-19ನೇ ಸಾಲಿಗೆ ಶೇ.8.65 ಬಡ್ಡಿದರಕ್ಕೆ ತನ್ನ ಒಪ್ಪಿಗೆಯನ್ನು ನೀಡಿತ್ತು ಮತ್ತು ಬಡ್ಡಿ ಹೆಚ್ಚಳದ ಪ್ರಸ್ತಾವನೆಯನ್ನು ವಿತ್ತ ಸಚಿವಾಲಯದ ಅನುಮತಿಗಾಗಿ ಸಲ್ಲಿಸಲಾಗಿತ್ತು.

ಹಾಲಿ ಇಪಿಎಫ್‌ಒ ಹಣ ಹಿಂದೆಗೆತ ಕೋರಿಕೆಗಳನ್ನು ಶೇ.8 ಬಡ್ಡಿಯೊಂದಿಗೆ ಇತ್ಯರ್ಥಗೊಳಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News