ಧರ್ಮ, ನರ್ಮದಾ ಹೆಸರಲ್ಲಿ ನಡೆಸಿದ ಹಗರಣಗಳ ತನಿಖೆ: ಕಮಲ್ ನಾಥ್

Update: 2019-09-17 16:22 GMT

ಭೋಪಾಲ,ಸೆ.17: ಬಿಜೆಪಿ ಸರಕಾರದ ಅವಧಿಯಲ್ಲಿ ಧರ್ಮ ಮತ್ತು ನರ್ಮದಾ ನದಿಯ ಹೆಸರಲ್ಲಿ ನಡೆದಿರುವ ಹಗರಣಗಳ ತನಿಖೆಗೆ ಆದೇಶಿಸುವುದಾಗಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್ ಮಂಗಳವಾರ ತಿಳಿಸಿದ್ದಾರೆ. ಅಧಿಕಾರಕ್ಕೆ ಬಂದರೆ ನರ್ಮದಾ ನದಿತೀರದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಮತ್ತು ಒಂದು ದಿನದಲ್ಲಿ ಒಂದು ಕೋಟಿ ಗಿಡಗಳನ್ನು ನೆಟ್ಟಿದ್ದೇವೆ ಎನ್ನುವ ಅಂದಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುವುದಾಗಿ ಕಳೆದ ವರ್ಷ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಹೇಳಿಕೊಂಡಿತ್ತು. ಭೋಪಾಲದಲ್ಲಿ ಆಯೋಜಿಸಲಾಗಿದ್ದ ಸಂತ ಸಮಾಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲ್‌ನಾಥ್, ಕೆಲವರು ಚುನಾವಣೆಯ ಸಮಯದಲ್ಲಿ ಧಾರ್ಮಿಕ ಜನರ ಮೇಲೆ ಹಕ್ಕನ್ನು ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಮತ್ತು ಇತರರು ಅವರ ಬಗ್ಗೆ ಮಾತನಾಡುವಾಗ ಕಸಿವಿಸಿಗೊಳ್ಳುತ್ತಾರೆ. ನಾನು ಚಿಂಡ್ವಾರದಲ್ಲಿ ಹನುಮಾನ್ ಮಂದಿರ ಸ್ಥಾಪಿಸಿದಾಗಲೂ ಅದೇ ನೋವನ್ನು ಅನುಭವಿಸಿದ್ದರು. ನಾನು ದೇವಾಲಯಗಳಿಗೆ ತೆರಳುವಾಗ ಮತ್ತು ಸಾಧುಗಳನ್ನು ಭೇಟಿಯಾದಾಗಲೂ ಅವರಿಗೆ ನೋವಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News