ನೆಹರೂ ‘ಲಂಪಟ’: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

Update: 2019-09-18 17:50 GMT

ಮಝಪ್ಫರನಗರ, ಸೆ. 18: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ‘ಲಂಪಟ’ ಎಂದು ಕರೆಯುವ ಮೂಲಕ ಖತೌಲಿ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ಸೈನಿ ವಿವಾದ ಸೃಷ್ಟಿಸಿದ್ದಾರೆ. ಬ್ರಿಟೀಷರಿಂದ ಮೂರ್ಖತನಕೆ ಒಳಗಾಗಿ ನೆಹರೂ ಅವರು ದೇಶವನ್ನು ವಿಭಜಿಸಿದರು ಎಂದು ಕೂಡ ಅವರು ಹೇಳಿದ್ದಾರೆ.

 ವಿವಾದಾತ್ಮಕ ಹೇಳಿಕೆಗೆ ಜನಪ್ರಿಯವಾಗಿರುವ ಸೈನಿ, ನೆಹರೂ-ಗಾಂಧಿ ಕುಟುಂಬದವರು ಲಂಪಟರು ಎಂದಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗೆ ಸೋನಿಯಾ ಗಾಂಧಿ ವಿವಾಹ ಇಟಲಿಯಲ್ಲಿ ನಡೆದಿರುವುದನ್ನು ಅವರು ಟೀಕಿಸಿದ್ದಾರೆ. ಅಲ್ಲದೆ, ಸಂಪೂರ್ಣ ಕುಟುಂಬ ಇಂತಹ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ವಿಶ್ವ ನಾಯಕರು ಇರುವ ಹಳೆಯ ಫೋಟೊ ಒಂದನ್ನು ಅವರು ಫೋಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾರ್ವೆ ಪ್ರಧಾನಿ ಎರ್ನಾ ಸೋಲಬೆರ್ಗ್ ಮೋದಿ ಅವರತ್ತ ನೋಡುತ್ತಿದ್ದಾರೆ. ಈ ಫೋಟೊಗೆ ಅವರು, ‘‘ಮೋದಿ ಅವರು ಭಾರತ ಮಾತೆಯ ವೈಭವವನ್ನು ಮಾತ್ರ ನೋಡುತ್ತಾರೆ. ಬೇರೆ ಯಾವುದನ್ನೂ ನೋಡಲಾರರು. ಭಾರತ ಮಾತೆಯ ಪುತ್ರನಿಗೆ ವಂದಿಸಿ’’ ಎಂದು ಕ್ಯಾಪ್ಸನ್ ನೀಡಿದ್ದಾರೆ. ನೆಹರೂ ಅವರನ್ನು ಅಣಕಿಸುವ ಹಾಗೂ ಸೋಲ್‌ಬೆರ್ಗ್‌ಗೆ ‘‘ಅವರತ್ತ ಕೆಟ್ಟ ದೃಷ್ಟಿಯಿಂದ ನೋಡಬೇಡ ಅವಿವೇಕಿ ಹೆಂಗಸೇ. ಅವರು ಮೋದಿ, ನೆಹರೂ ಅಲ್ಲ’’ ಎಂದು ಸಲಹೆ ನೀಡುವ ಮೂಲಕ ಸೈನಿ ಪೋಸ್ಟ್ ಅನ್ನು ಅಂತ್ಯಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News