ಪ್ರತಿಷ್ಠಿತ ‘ಎಮಿ ಅವಾರ್ಡ್ಸ್’ಗೆ ಭಾರತದ 2 ವೆಬ್ ಸೀರೀಸ್ ಗಳು ನಾಮ ನಿರ್ದೇಶನ

Update: 2019-09-20 10:58 GMT

ಹೊಸದಿಲ್ಲಿ, ಸೆ.20: ‘ನೆಟ್‍ ಫ್ಲಿಕ್ಸ್’ ಇಂಡಿಯಾದ ವೆಬ್ ಸೀರೀಸ್ ‘ಸೇಕ್ರೆಡ್ ಗೇಮ್ಸ್’, ‘ಲಸ್ಟ್ ಸ್ಟೋರೀಸ್’ ಮತ್ತು ಅಮೆಝಾನ್ ಪ್ರೈಮ್ ನ ‘ದ ರಿಮಿಕ್ಸ್’ ಪ್ರತಿಷ್ಠಿತ ಅಂತಾರಾಷ್ಟ್ರೀಯ ‘ಎಮಿ ಅವಾರ್ಡ್ಸ್’ಗೆ ನಾಮನಿರ್ದೇಶನಗೊಂಡಿವೆ.

ಸೈಫ್ ಅಲಿ ಖಾನ್ ಮತ್ತು ನವಾಝುದ್ದೀನ್ ಸಿದ್ದಿಕ್ಕಿ ಮುಖ್ಯಭೂಮಿಕೆಯ ‘ಸೇಕ್ರೆಡ್ ಗೇಮ್ಸ್’‍ನ ಮೊದಲ ಆವೃತ್ತಿ ಅತ್ಯುತ್ತಮ ಡ್ರಾಮಾ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಜತೆಗೆ ಬ್ರೆಝಿಲ್‍ ನ ‘ಕೋಂಟ್ರಾ ತೊಡೋಸ್’ (ಮೂರನೇ ಆವೃತ್ತಿ), ಜರ್ಮನಿಯ ‘ಬ್ಯಾಡ್ ಬ್ಯಾಂಕ್ಸ್’ ಮತ್ತು ಇಂಗ್ಲೆಂಡ್‍ ನ ‘ಮೆಕ್‍ ಮಾಫಿಯಾ’ ಕೂಡಾ ನಾಮನಿರ್ದೇಶನಗೊಂಡಿವೆ.

ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನೀರಜ್ ಘಾಯ್‍ ವಾನ್ ‘ಸೇಕ್ರೆಡ್ ಗೇಮ್ಸ್’‍ನ ಎರಡನೇ ಆವೃತ್ತಿ ನಿರ್ದೇಶಿಸಿದ್ದಾರೆ.

ಅನುರಾಗ್  ಕಶ್ಯಪ್ ನಿರ್ದೇಶಿಸಿದ ಭಾಗದಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಧಿಕಾ ಆಪ್ಟೆ ಉತ್ತಮ ನಟಿ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದಾರೆ. ‘ದ ಕ್ರೈ’ ಚಿತ್ರದ ನಟಿ ಜೆನ್ನಾ ಕೋಲ್‍ ಮನ್, ‘ಸೋಬ್ ಪ್ರೆಸ್ಸಾವೊ-2’ ಚಿತ್ರದ ಮರ್ಜೋರಿ ಎಸ್ಟಿಯಾನೊ ಮತ್ತು ಓರಾಕ್ ಟೆಲ್‍ನ ಮರಿಯಾ ಗೇರಾ ಜತೆ ಸ್ಪರ್ಧೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News