ತಮಿಳು ಕೂಡಾ ರಾಷ್ಟ್ರೀಯ ಭಾಷೆಯಾಗಬಹುದು ಎಂದ ಬಿಜೆಪಿ ನಾಯಕ

Update: 2019-09-20 15:22 GMT

ಚೆನ್ನೈ,ಸೆ.20: ಹಿಂದಿಯನ್ನು ರಾಷ್ಟ್ರ ಭಾಷೆ ಮಾಡಬೇಕೆಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಸೃಷ್ಟಿಸಿದ ವಿವಾದ ಇನ್ನೂ ಜೀವಂತವಿರುವಾಗಲೇ ಈ ವಿವಾದಕ್ಕೆ ತನ್ನ ಪಾಲಿನ ಕಾಣಿಕೆ ನೀಡಿರುವ ಬಿಜೆಪಿ ನಾಯಕ ಪೊನ್ ರಾಧಾಕೃಷ್ಣನ್, ತಮಿಳು ಭಾಷೆಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಬಹುದು ಎನ್ನುವ ಸಲಹೆ ನೀಡಿದ್ದಾರೆ.

“ಓರ್ವ ತಮಿಳಿಗನಾಗಿ ನಾನು ನನ್ನ ಭಾಷೆಯನ್ನು ಅಭಿವೃದ್ಧಿಗೊಳಿಸಲು ಬಯಸುತ್ತೇನೆ. ಒಂದು ವೇಳೆ ನಾವು ನಮ್ಮ ಭಾಷೆಯ ಸ್ಥಾನಮಾನವನ್ನು ಉತ್ತಮಗೊಳಿಸಿದರೆ ಮತ್ತು ಅದನ್ನು ಎಲ್ಲ ರಾಜ್ಯಗಳಲ್ಲೂ ಹರಡಿದರೆ ತಮಿಳನ್ನೂ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬಹುದಾಗಿದೆ” ಎಂದು ತಿಳಿಸಿದ್ದಾರೆ.

ಅದೇ ವೇಳೆ, ಸಂವಹನಕ್ಕಾಗಿ ನಾವು ಒಂದೇ ಭಾಷೆಯನ್ನು ಒಪ್ಪಿಕೊಳ್ಳಲೇಬೇಕು ಎಂದು ಮಾಜಿ ಕೇಂದ್ರ ಸಚಿವ ರಾಧಾಕೃಷ್ಣನ್ ಅಭಿಪ್ರಾಯಿಸಿದ್ದಾರೆ. ಹಿಂದಿಯಿಂದ ಮಾತ್ರ ದೇಶವನ್ನು ಒಂದುಗೂಡಿಸಲು ಸಾಧ್ಯ ಎಂದು ಹೇಳುವ ಮೂಲಕ ಅಮಿತ್ ಶಾ ಕಳೆದ ವಾರ ವಿವಾದಕ್ಕೀಡಾಗಿದ್ದರು. ಶಾ ಹೇಳಿಕೆ ವಿಪಕ್ಷಗಳಿಂದ, ಮುಖ್ಯವಾಗಿ ದಕ್ಷಿಣ ಭಾರತೀಯ ರಾಜ್ಯಗಳಿಂದ ವಿರೋಧವನ್ನು ಎದುರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News