×
Ad

92ನೆ ‘ಆಸ್ಕರ್ಸ್’ಗೆ ಭಾರತದಿಂದ ಪ್ರವೇಶ ಪಡೆದ ‘ಗಲ್ಲಿ ಬಾಯ್’

Update: 2019-09-21 19:09 IST

92ನೆ ‘ಆಸ್ಕರ್ಸ್’ಗೆ ಭಾರತದಿಂದ ರಣವೀರ್ ಸಿಂಗ್, ಆಲಿಯಾ ಭಟ್ ನಟನೆಯ ‘ಗಲ್ಲಿ ಬಾಯ್’ ಚಿತ್ರ ಪ್ರವೇಶ ಗಿಟ್ಟಿಸಿಕೊಂಡಿದೆ. ಈ ಚಿತ್ರವನ್ನು ಝೋಯಾ ಅಖ್ತರ್ ನಿರ್ದೇಶಿಸಿದ್ದರು.

“92ನೆ ಆಸ್ಕರ್ಸ್ ಅವಾರ್ಡ್ ಗೆ ಭಾರತದಿಂದ ಗಲ್ಲಿ ಬಾಯ್ ಅಧಿಕೃತವಾಗಿ ಪ್ರವೇಶ ಪಡೆದಿದೆ” ಎಂದು ಫರ್ಹಾನ್ ಅಖ್ತರ್ ಟ್ವೀಟ್ ಮಾಡಿದ್ದಾರೆ.

ಗಲ್ಲಿ ರ್ಯಾಪರ್ ಮುರಾದ್ ತಾನು ರಾಷ್ಟ್ರೀಯ ಮಟ್ಟದ ರ್ಯಾಪರ್ ಆಗಬೇಕು ಎನ್ನುವ ಕನಸು ಕಾಣುವ ಮತ್ತು ಆ ಕನಸನ್ನು ನನಸಾಗಿಸುವ ಕಥೆಯ ಚಿತ್ರ ‘ಗಲ್ಲಿ ಬಾಯ್’ ಚಿತ್ರದಲ್ಲಿ ಆಲಿಯಾ ಭಟ್, ಕಲ್ಕಿ ಕೊಚ್ಲಿನ್, ಸಿದ್ಧಾಂತ್ ಚತುರ್ವೇದಿ, ವಿಜಯ್ ರಾಝ್, ವಿಜಯ್ ವರ್ಮಾ ಮೊದಲಾದವರು ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News