ರಾಹುಲ್ ಅವಾರೆಗೆ ಕಂಚು

Update: 2019-09-22 18:50 GMT

ನೂರ್ ಸುಲ್ತಾನ್,ಸೆ.22: ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ರವಿವಾರ ರಾಹುಲ್ ಅವಾರೆ ಕಂಚು ಜಯಿಸಿದರು. ಈ ಮೂಲಕ ಟೂರ್ನಿಯಲ್ಲಿ ಭಾರತ ಪದಕ ಗಳಿಕೆಯಲ್ಲಿ ಉತ್ತಮ ಸಾಧನೆ ಮಾಡಿತು.

61 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪ್ಲೇ-ಆಫ್ ಸುತ್ತಿನಲ್ಲಿ ಅವಾರೆ 2017ರ ಪಾನ್-ಅಮೆರಿಕ ಚಾಂಪಿಯನ್, ಅಮೆರಿಕದ ಕುಸ್ತಿಪಟು ಟೇಲರ್ ಲೀ ಗ್ರಾಫ್‌ರನ್ನು 11-4 ಅಂತರದಿಂದ ಮಣಿಸಿದರು. ಇದರೊಂದಿಗೆ ಚಾಂಪಿಯನ್‌ಶಿಪ್‌ನಲ್ಲಿ ಭಾರತ 5ನೇ ಪದಕ ಗೆಲ್ಲಲು ನೆರವಾದರು. 2013ರ ಆವೃತ್ತಿಯಲ್ಲಿ ಭಾರತ ಮೂರು ಪದಕ ಜಯಿಸಿತ್ತು. ಅಮಿತ್ ದಹಿಯಾ(ಬೆಳ್ಳಿ), ಬಜರಂಗ್‌ಪೂನಿಯಾ(ಕಂಚು) ಹಾಗೂ ಸಂದೀಪ್ ತುಳ್ಸಿ ಯಾದವ್(ಕಂಚು)ತಲಾ 1 ಪದಕ ಜಯಿಸಿದ್ದರು.

ಸ್ಪರ್ಧೆಯಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ್ದ ಆವಾರೆ ವೃತ್ತಿಜೀವನದಲ್ಲಿ ಮಹತ್ವದ ಪದಕ ಜಯಿಸಿದರು. ಮಹಾರಾಷ್ಟ್ರದ ಕುಸ್ತಿಪಟು 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ, 2009, 2011ರ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 2 ಬಾರಿ ಕಂಚು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News