‘ಫ್ಯಾಶಿಸಂ ವಿರುದ್ಧದ ಪ್ರತಿಭಟನೆ’: ಬಾಬುಲ್ ಸುಪ್ರಿಯೋರನ್ನು ತಳ್ಳಾಡಿದ ವಿದ್ಯಾರ್ಥಿ

Update: 2019-09-23 10:02 GMT

ಕೊಲ್ಕತ್ತಾ, ಸೆ.23: ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಜಾಧವಪುರ್ ವಿವಿಗೆ ಭೇಟಿ ನೀಡಿದ್ದ ವೇಳೆ ಅವರನ್ನು ತಳ್ಳಾಡಿದ್ದ ವಿದ್ಯಾರ್ಥಿ ದೇಬಾಂಜನ್ ಬಲ್ಲವ್ ಈ ಬಗ್ಗೆ ತನಗೆ ವಿಷಾದವಿಲ್ಲ ಎಂದಿದ್ದಾರೆ.

ವಿವಿಯ ಎರಡನೇ ವರ್ಷದ ವಿದ್ಯಾರ್ಥಿಯಾಗಿರುವ ಬಲ್ಲವ್ ತಾನು ಮಾಡಿದ್ದು ‘ಫ್ಯಾಶಿಸಂ ವಿರುದ್ಧದ ಪ್ರತಿಭಟನೆಯಾಗಿದೆ' ಎಂದು ಹೇಳಿದರಲ್ಲದೆ ಸುಪ್ರಿಯೊ ಅವರ ಕೂದಲೆಳೆದು ಹಲ್ಲೆಗೈದಿದ್ದಕ್ಕೆ ಪಶ್ಚಾತ್ತಾಪವಿಲ್ಲ ಎಂದಿದ್ದಾರೆ.

ಯುಎಸ್‍ ಡಿಎಫ್ ಕಾರ್ಯಕರ್ತರೂ ಆಗಿರುವ ಬಲ್ಲವ್ ತನ್ನ ವಿರುದ್ಧ  ಕ್ರಮದ ಸಂಭಾವ್ಯತೆಯ ಬಗ್ಗೆ ತಮಗೆ ಭಯವಿಲ್ಲ. ಅದೇ ಸಮಯ ತನ್ನನ್ನು ಟಾರ್ಗೆಟ್ ಮಾಡುವ ಸಾಧ್ಯತೆಯಿದೆ ಎಂದೂ ಹೇಳಿದ್ದಾರೆ.

ತಮ್ಮ ಪುತ್ರನ ಭವಿಷ್ಯವನ್ನು ಹಾಳುಗೆಡಹದಂತೆ ಬಲ್ಲವ್ ತಾಯಿ ಸಚಿವರಿಗೆ ಮನವಿ ಮಾಡುತ್ತಿರುವ ವೀಡಿಯೋ ಕೂಡ ವೈರಲ್ ಆಗಿತ್ತು. ಇದಕ್ಕೆ ಸ್ಪಂದಿಸಿದ್ದ ಸಚಿವ ಆಕೆಗೆ ಚಿಂತೆ ಮಾಡದಂತೆ ಹಾಗೂ ಆಕೆಯ ಪುತ್ರನ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದಿದ್ದರು. ತಾವು ಬಲ್ಲವ್ ವಿರುದ್ಧ ದೂರು ಕೂಡ ನೀಡಿಲ್ಲ ಹಾಗೂ ಇತರ ಯಾರಿಗೂ ದೂರು ನೀಡಲು ಬಿಟ್ಟಿಲ್ಲ ಎಂದೂ ಸಚಿವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News