×
Ad

ವಿಮಾನ ಯಾನ ಹಗರಣ: ಸಿಬಿಐಯಿಂದ ದೀಪಕ್ ತಲ್ವಾರ್ ವಿರುದ್ಧ ಆರೋಪ ಪಟ್ಟಿ ದಾಖಲು

Update: 2019-09-23 21:11 IST

ಹೊಸದಿಲ್ಲಿ, ಸೆ. 23: ಏರ್ ಇಂಡಿಯಾ ನಷ್ಟಕ್ಕೆ ಕಾಣವಾಗಿದ್ದೆನ್ನಲಾದ ವಿಮಾನ ಯಾನ ಹಗರಣಕ್ಕೆ ಸಂಬಂಧಿಸಿ ಕಾರ್ಪೊರೇಟ್ ಲಾಬಿಗಾರ ದೀಪಕ್ ತಲ್ವಾರ್ ವಿರುದ್ಧ ಸಿಬಿಐ ಸೋಮವಾರ ಆರೋಪ ಪಟ್ಟಿ ದಾಖಲಿಸಿದೆ. ಇತರ ಆರೋಪಗಳಲ್ಲದೆ ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 8ರ ಅಡಿಯಲ್ಲಿ ತಲ್ವಾರ್ ವಿರುದ್ಧ ಸಿಬಿಐ ಅಂತಿಮ ವರದಿಯನ್ನು ವಿಶೇಷ ನ್ಯಾಯಾಧೀಶ ಅನಿಲ್ ಕುಮಾರ್ ಸಿಸೋಡಿಯಾ ಅವರಿಗೆ ಸಲ್ಲಿಸಿದೆ.

ತಲ್ವಾರ್ ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಅವರ ನಿಕಟವರ್ತಿಗಳಾಗಿರುವ ಯಾಸ್ಮೀನ್ ಕಪೂರ್, ಮಾಯಾ ಬಿ ಪುರಿ ಅವರ ಹಾಗೂ ಸ್ಟೋನ್ ಟ್ರಾವೆಲ್ ಪ್ರೈವೇಟ್ ಲಿಮಿಟೆಡ್, ಸಿಡಾರ್ ಟ್ರಾವೆಲ್ಸ್, ದೀಪಕ್ ತಲ್ವಾರ್ ಆ್ಯಂಡ್ ಅಸೋಸಿಯೇಟ್ಸ್ ಹಾಗೂ ಏಷಿಯಾ ಫೀಲ್ಡ್ ಲಿಮಿಟೆಡ್ ಹೆಸರನ್ನು ಕೂಡ ಆರೋಪ ಪಟ್ಟಿ ಹೊಂದಿದೆ ನ್ಯಾಯಾಲಯ ಅಕ್ಟೋಬರ್ 1ರಂದು ಈ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಲಿದೆ.

ನಿರೀಕ್ಷಣಾ ಜಾಮೀನು ಮನವಿಯನ್ನು ನ್ಯಾಯಮೂರ್ತಿ ತಿರಸ್ಕರಿಸಿದ ಬಳಿಕ ನ್ಯಾಯಾಲಯದ ಕೊಠಡಿಯ ಒಳಗಿನಿಂದ ಜುಲೈ 26ರಂದು ತಲ್ವಾರ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆಗಸ್ಟ್ 9ರಂದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ವಿಮಾನ ಯಾನ ಒಪ್ಪಂದದಲ್ಲಿ ಮಧ್ಯವರ್ತಿಯಾಗಿದ್ದ ತಲ್ವಾರ್ ಖತರ್ ಏರ್‌ವೇಸ್, ಎಮಿರೇಟ್ಸ್ ಹಾಗೂ ಏರ್ ಅರೇಬಿಯಾ ಸಹಿತ ವಿದೇಶಿ ಖಾಸಗಿ ವಿಮಾನ ಸಂಸ್ಥೆಗಳ ಪರವಾಗಿ ಕಾರ್ಯ ನಿರ್ವಹಿಸಿದ್ದ.

ಏರ್ ಇಂಡಿಯ ತನ್ನ ಲಾಭದಾಯಕ ಪಥ ಹಾಗೂ ಸಮಯವನ್ನು ಕೈ ಬಿಡುವಂತೆ ಮಾಡಿದ್ದ ಎಂದು ಸಿಬಿಐ ಆರೋಪಿಸಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ಸಂದರ್ಭ ಈ ಒಪ್ಪಂದ ನಡೆದಿದೆ ಎಂದು ಸಿಬಿಐ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News