×
Ad

ಮೋದಿ ನೀತಿಸಂಹಿತೆ ಉಲ್ಲಂಘನೆ ವಿಚಾರದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದ ಚುನಾವಣಾ ಆಯುಕ್ತರ ಪತ್ನಿಗೆ ಐಟಿ ನೋಟಿಸ್

Update: 2019-09-23 22:02 IST

ಹೊಸದಿಲ್ಲಿ, ಸೆ.23: ಚುನಾವಣಾ ಆಯುಕ್ತ ಅಶೋಕ್ ಲಾವಸರ ಪತ್ನಿ ನೋವೆಲ್ ಸಿಂಘಲ್‌ಗೆ ಸೋಮವಾರ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿಗೊಳಿಸಿದೆ. ನೋವೆಲ್ ಹಲವು ಸಂಸ್ಥೆಗಳ ನಿರ್ದೇಶಕಿಯಾಗಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ದಲ್ಲಿ ಉದ್ಯೋಗಿಯಾಗಿದ್ದ ನೋವೆಲ್ 2005ರಲ್ಲಿ ರಾಜೀನಾಮೆ ನೀಡಿದ್ದರು. ಬಳಿಕ ಹಲವು ಸಂಸ್ಥೆಗಳ ಸ್ವತಂತ್ರ ನಿರ್ದೇಶಕಿಯಾಗಿರುವ ನೋವೆಲ್ ಅವರ ಆದಾಯಕ್ಕೆ ಸಂಬಂಧಿಸಿದ ನೋಟಿಸ್ ಇದಾಗಿದೆ. ಲೋಕಸಭಾ ಚುನಾವಣೆಯ ಸಂದರ್ಭ ಅಶೋಕ್ ಲಾವಸ ಚುನಾವಣಾ ಆಯೋಗದ ಇತರ ಆಯುಕ್ತರಿಗಿಂತ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಗಮನ ಸೆಳೆದಿದ್ದರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಕುರಿತ ದೂರಿನ ಬಗ್ಗೆ ಆಯೋಗ ತಳೆದ ನಿರ್ಧಾರವನ್ನು ಲಾವಸ ವಿರೋಧಿಸಿದ್ದರು. ಅಲ್ಲದೆ ಬಳಿಕ ಆಯೋಗದ ಸಭೆಯಲ್ಲಿ ಭಾಗವಹಿಸದಿರುವ ನಿರ್ಧಾರಕ್ಕೆ ಬಂದಿದ್ದರು. ಚುನಾವಣಾ ಆಯೋಗದ ಸಭೆಯಲ್ಲಿ ವ್ಯಕ್ತವಾಗುವ ಭಿನ್ನಾಭಿಪ್ರಾಯದ ಟಿಪ್ಪಣಿಯನ್ನೂ ದಾಖಲಿಸಿಕೊಳ್ಳಬೇಕು ಎಂಬ ಲಾವಸ ಬೇಡಿಕೆಯನ್ನು ಆಯೋಗ ಬಹುಮತದಿಂದ ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News