ಇಸ್ರೋದ 'ನಾವಿಕ್' ಪಥದರ್ಶಕ ವ್ಯವಸ್ಥೆಗೆ ಜಾಗತಿಕ ಮಾನ್ಯತೆ

Update: 2019-09-24 14:59 GMT

ಹೊಸದಿಲ್ಲಿ, ಸೆ.24: ಮೊಬೈಲ್ ಸಾಧನಗಳಿಗೆ ಪ್ರೊಟೋಕಾಲ್ ಅಭಿವೃದ್ಧಿಪಡಿಸುವ ಜಾಗತಿಕ ಗುಣಮಟ್ಟ ಸಂಸ್ಥೆಯಾದ 3ಜಿಪಿಪಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿದ ಭಾರತದ ಪ್ರಾದೇಶಿಕ ಪಥದರ್ಶಕ ವ್ಯವಸ್ಥೆ 'ನಾವಿಕ್‌'ಗೆ ಮಾನ್ಯತೆ ನೀಡಿದೆ.

ಈ ನಿರ್ದಿಷ್ಟತೆಗಳಿಗೆ 3ಜಿಪಿಪಿ ಅನುಮೋದನೆ ನೀಡುವುದರೊಂದಿಗೆ, ಅಂತಾರಾಷ್ಟ್ರೀಯ ಹಾಗೂ ದೇಶೀಯ ಮೊಬೈಲ್ ಸಾಧನಗಳ ಉತ್ಪಾದಕ ವರ್ಗದಲ್ಲಿ ನಾವಿಕ್ ವಾಣಿಜ್ಯ ಬಳಕೆಗೆ ಉತ್ತೇಜನ ಸಿಗಲಿದೆ. ಅಂದರೆ ಇಂಥ ಉತ್ಪಾದಕರು ನಾವಿಕ್ ಪಥದರ್ಶಕ ವ್ಯವಸ್ಥೆಗೆ ಹೊಂದಾಣಿಕೆಯಾಗುವ ಪಥದರ್ಶಕ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಬಹುದಾಗಿದೆ. 

 ಸೆಪ್ಟೆಂಬರ್ 16 ರಿಂದ 20ರರವರೆಗೆ ಕ್ಯಾಲಿಫೋರ್ನಿಯಾದಲ್ಲಿ ನಡೆದ ಥರ್ಡ್ ಜನರೇಶನ್ ಪಾರ್ಟ್‌ನರ್‌ಶಿಪ್ ಪ್ರಾಜೆಕ್ಟ್ (3ಜಿಪಿಪಿ), ನಾವಿಕ್ ವ್ಯವಸ್ಥೆಯನ್ನು ಆರ್‌ಇಎಲ್-16 ಎಲ್‌ಟಿಇ ಮತ್ತು ಆರ್‌ಇಎಲ್- 17 5ಜಿ ಎನ್‌ಆರ್ ನಿರ್ದಿಷ್ಟತೆಗಳಲ್ಲಿ ಸೇರಿಸಲು ಅನುಮೋದನೆ ನೀಡಿದೆ. ಭಾರತದ ದೂರಸಂಪರ್ಕ ಗುಣಮಟ್ಟ ಅಭಿವೃದ್ಧಿ ಸೊಸೈಟಿ (ಟಿಎಸ್‌ಡಿಎಸ್‌ಐ) ಸದ್ಯದಲ್ಲೇ ಈ ನಿರ್ದಿಷ್ಟತೆಗಳನ್ನು ರಾಷ್ಟ್ರೀಯ ಮಾನದಂಡವಾಗಿ ಅಳವಡಿಸಿಕೊಳ್ಳಲಿದೆ. ಮೊಬೈಲ್‌ನ ಇಂಟರ್‌ನೆಟ್ ಆಫ್ ಥಿಂಕ್ಸ್ ಸಾಧನಗಳು ಅಮೆರಿಕದ ಜಿಪಿಎಸ್ ವ್ಯವಸ್ಥೆಯ ಬದಲಾಗಿ ನಾವಿಕ್ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News