ಅಸ್ಸಾಂನಲ್ಲಿ ಮತ್ತೆ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿ ಎಂದ: ಕೇಂದ್ರ ಸಚಿವ

Update: 2019-09-24 16:24 GMT

ದಿಸ್ಪುರ್,ಸೆ.24: ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸಂಸತ್‌ನಲ್ಲಿ ಮತ್ತೆ ಮಂಡಿಸಲಾಗುವುದು ಮತ್ತು ಅಸ್ಸಾಂನಲ್ಲಿ ಹೊಸ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿ ಮಾಡಲಾಗುವುದು ಎಂದು ಅಸ್ಸಾಂ ಸಚಿವ ಮತ್ತು ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ ಸೋಮವಾರ ತಿಳಿಸಿದ್ದಾರೆ.

ಈ ಮಸೂದೆ ತಮ್ಮ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯ ಹಿತಾಸಕ್ತಿಯ ವಿರುದ್ಧವಾಗಿದೆ ಎಂದು ಜನರು ಭಾವಿಸಬಾರದು. ಅದು ನತದೃಷ್ಟ ಜನರಿಗೆ ಆಶ್ರಯ ಒದಗಿಸುತ್ತಿವೆ ಎಂದು ತಿಳಿಯಬೇಕು. ಅದಕ್ಕಾಗಿಯೇ ಸರಕಾರ ನವೆಂಬರ್‌ನಲ್ಲಿ ನಡೆಯುವ ಸಂಸತ್‌ನ ಚಳಿಗಾಲದ ಅಧೀವೇಶನದಲ್ಲಿ ಬೆಂಗಾಳಿ ಹಿಂದುಗಳು, ಕ್ರೈಸ್ತರು, ಬೌದ್ಧರು, ಸಿಖ್ಖರು ಮತ್ತು ಜೈನರು ಸೇರಿದಂತೆ 2014 ಮೊದಲು ದೇಶಕ್ಕೆ ಆಗಮಿಸಿರುವ ಮತ್ತು ಭಾರತವನ್ನು ತಮ್ಮ ಮಾತೃಭೂಮಿ ಎಂದು ಭಾವಿಸುವ ಎಲ್ಲರಿಗೂ ಪೌರತ್ವ ಒದಗಿಸುವ ಇರಾದೆಯಿಂದ ಸರಕಾರ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಮಂಡಿಸಲಿದೆ ಎಂದು ಶರ್ಮಾ ತಿಳಿಸಿದ್ದಾರೆ.

ಈಗ ನಡೆದಿರುವ ಎನ್‌ಆರ್‌ಸಿ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಲಿ ಮತ್ತು ಈ ಎನ್‌ಆರ್‌ಸಿಯನ್ನು ಬಿಜೆಪಿ ತಿರಸ್ಕರಿಸುತ್ತದೆ ಎಂದು ನಾವು ತಿಳಿಸುತ್ತೇವೆ. ನಮಗೆ ಈ ಎನ್‌ಆರ್‌ಸಿ ಮೇಲೆ ನಂಬಿಕೆಯಿಲ್ಲ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನಾಯಕತ್ವದಲ್ಲಿ ಮತ್ತೊವ್ಮೆು ಎನ್‌ಆರ್‌ಸಿ ನಡೆಯಲಿದೆ. ಈಗ ನಗುತ್ತಿರುವವರು ಖಂಡಿತವಾಗಿಯೂ ಮುಂದೆ ಅಳುತ್ತಾರೆ ಎಂದು ಸರ್ಮಾ ತಿಳಿಸಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News