ಜ.19ರಂದು ನೂತನ ಸ್ವರೂಪದಲ್ಲಿ ಕಂಬೈನ್ಡ್ ಜಿಯೊ-ಸೈಂಟಿಸ್ಟ್ ಪರೀಕ್ಷೆ
ಹೊಸದಿಲ್ಲಿ,ಸೆ.25: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ವು ಕಂಬೈನ್ಡ್ ಜಿಯೊ-ಸೈಂಟಿಸ್ಟ್ ಪರೀಕ್ಷೆಯನ್ನು 2020,ಜ.19ರಂದು ನಡೆಸಲಿದೆ. ಅರ್ಜಿಗಳನ್ನು ಸಲ್ಲಿಸಲು ಅ.15ರವರೆಗೆ ಸಮಯಾವಕಾಶವಿದೆ.
ಇದಕ್ಕೂ ಮುನ್ನ ಈ ಪರೀಕ್ಷೆಯನ್ನು ಕಂಬೈನ್ಡ್ ಜಿಯೊ-ಸೈಂಟಿಸ್ಟ್ ಆ್ಯಂಡ್ ಜಿಯಾಲಜಿಸ್ಟ್ ಎಕ್ಸಾಮ್ ಎಂದು ಕರೆಯಲಾಗುತ್ತಿತ್ತು. ಯುಪಿಎಸ್‌ಸಿ ಈ ಪರೀಕ್ಷೆಯ ಮೂಲಕ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದಲ್ಲಿ ಭೂಗರ್ಭ ಶಾಸ್ತ್ರಜ್ಞರು,ಭೂ ಭೌತ ಶಾಸ್ತ್ರಜ್ಞರು ಮತ್ತು ಕೆಮಿಸ್ಟ್‌ಗಳ ಹುದ್ದೆಗಳಿಗೆ ಮತ್ತು ಜಲ ಸಂಪನ್ಮೂಲಗಳ ಸಚಿವಾಲಯದ ಅಧೀನದ ಕೇಂದ್ರ ಅಂತರ್ಜಲ ಮಂಡಳಿಯಲ್ಲಿ ಕಿರಿಯ ಜಲ ಭೂವಿಜ್ಞಾನಿ ಹುದ್ದೆಗೆ ನೇಮಕಕ್ಕಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.
ಈ ವರ್ಷ ಒಟ್ಟು 102 ಖಾಲಿಹುದ್ದೆಗಳನ್ನು ಪ್ರಕಟಿಸಲಾಗಿದೆ. ಕಳೆದ ವರ್ಷ ಇಂತಹ ಹುದ್ದೆಗಳ ಸಂಖ್ಯೆ 106 ಆಗಿತ್ತು.
ಹಿಂದಿನ ವರ್ಷದವರೆಗೂ ಕಂಬೈನ್ಡ್ ಜಿಯೊಸೈಂಟಿಸ್ಟ್ ಪರೀಕ್ಷೆಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿತ್ತು. ಈ ವರ್ಷದಿಂದ ಎರಡು ಹಂತಗಳ ಪರೀಕ್ಷೆಗಳು ಮತ್ತು ಸಂದರ್ಶನವನ್ನು ನಡೆಸಲಾಗುತ್ತದೆ.
ಪ್ರಿಲಿಮಿನರಿ ಪರೀಕ್ಷೆಯು ಜ.19ರಂದು ಮತ್ತು ಮುಖ್ಯ ಪರೀಕ್ಷೆ ಜೂ. 27 ಮತ್ತು 28ರಂದು ನಡೆಯಲಿವೆ.