ಜಗ್ಗಿ ವಾಸುದೇವ್ ನೇತೃತ್ವದ ಅಭಿಯಾನಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯಿರಿ: ಡಿಕ್ಯಾಪ್ರಿಯೋರಿಗೆ 92 ಸಂಘಟನೆಗಳ ಆಗ್ರಹ

Update: 2019-09-25 17:25 GMT

ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಇಶಾ ಫೌಂಡೇಶನ್ ಆರಂಭಿಸಿರುವ ‘ಕಾವೇರಿ ಕಾಲಿಂಗ್’ ಅಭಿಯಾನಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಪ್ರಸಿದ್ಧ ಹಾಲಿವುಡ್ ನಟ ಲಿಯೋನಾರ್ಡೊ ಡಿಕ್ಯಾಪ್ರಿಯೋ ಅವರಿಗೆ 92 ಸಂಘಟನೆಗಳು ಪತ್ರ ಬರೆದಿವೆ.

ಇತ್ತೀಚೆಗಷ್ಟೇ ಫೇಸ್ ಬುಕ್ ಪೋಸ್ಟ್ ಮಾಡಿದ್ದ ಡಿಕ್ಯಾಪ್ರಿಯೋ ಜಗ್ಗಿ ವಾಸುದೇವ್ ರ ‘ಕಾವೇರಿ ಕಾಲಿಂಗ್’ ಅಭಿಯಾನಕ್ಕೆ ಬೆಂಬಲ ಸೂಚಿಸುವಂತೆ ಜನರಲ್ಲಿ ಮನವಿ ಮಾಡಿದ್ದರು.

“ನಿಮಗೆ ಸರಿಯಾದ ಮಾಹಿತಿ ಸಿಗದೇ ಇರುವುದು ಅಥವಾ ‘ಕಾವೇರಿ ಕಾಲಿಂಗ್’ ಆರಂಭಿಸಿದ ವ್ಯಕ್ತಿಯ ಹಿನ್ನೆಲೆಯ ಅಧ್ಯಯನಕ್ಕೆ ನಿಮಗೆ ಸಮಯ ಸಿಗದೇ ಇದ್ದಿರಬಹುದು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ” ಎಂದು ಡಿಕ್ಯಾಪ್ರಿಯೋರಿಗೆ ಬರೆದ ಪತ್ರದಲ್ಲಿ ಈ ಸಂಘಟನೆಗಳ ಸದಸ್ಯರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News