ಕಾರ್ತಿ, ರಶ್ಮಿಕಾ ಅಭಿನಯದ ಚಿತ್ರೀಕರಣಕ್ಕೆ ಹಿಂದುತ್ವ ಕಾರ್ಯಕರ್ತರು ತಡೆಯೊಡ್ಡಿದ್ದು ಯಾಕೆ ಗೊತ್ತೇ?

Update: 2019-09-27 11:59 GMT

ಹೊಸದಿಲ್ಲಿ: ತಮಿಳುನಾಡಿನ ಡಿಂಡಿಗಲ್ ಎಂಬಲ್ಲಿ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಂರಕ್ಷಿಸಲ್ಪಟ್ಟ ಪ್ರದೇಶದ ಸಮೀಪ ಕಾರ್ತಿ, ರಶ್ಮಿಕಾ ಮಂದಣ್ಣ ಅಭಿನಯದ ಹಾಗೂ ಬಕ್ಕಿಯರಾಜ್ ಕಣ್ಣನ್ ನಿರ್ದೇಶನದ ‘ಸುಲ್ತಾನ್' ಚಿತ್ರದ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಮಂಗಳವಾರ ರಾತ್ರಿ ಆಗಮಿಸಿದ  ಬಿಜೆಪಿ ಹಾಗೂ ಹಿಂದು ಮುನ್ನಾನಿ  ಸಂಘಟನೆಯ ಸದಸ್ಯರು  ಚಿತ್ರೀಕರಣಕ್ಕೆ ಅಡ್ಡಿಯುಂಟು ಮಾಡಿದ್ದಾರೆ. ಅಷ್ಟಕ್ಕೂ ಅವರ ಈ ಪ್ರತಿಭಟನೆಗೆ ಕಾರಣ ಕುತೂಹಲ. ಚಿತ್ರದ ಹೆಸರು ‘ಸುಲ್ತಾನ್’ ಎಂಬ ಮಾತ್ರಕ್ಕೆ ಅದು ಟಿಪ್ಪು ಸುಲ್ತಾನ್ ಜೀವನಾಧರಿತ  ಚಲನಚಿತ್ರ ಎಂದು ತಪ್ಪಾಗಿ ತಿಳಿದುಕೊಂಡು ಈ ಪ್ರತಿಭಟನಾಕಾರರು ಬೇಸ್ತು ಬಿದ್ದಿದ್ದಾರೆ.

ಈ ಆ್ಯಕ್ಷನ್-ಕಾಮಿಡಿ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮುಂದುವರಿದಿದ್ದಾಗ ಈ ಘಟನೆ ನಡೆದಿದೆ.  ಪ್ರತಿಭಟನೆಯಿಂದ ಯಾವುದೇ ಸೊತ್ತಿಗೂ ಹಾನಿಯುಂಟಾಗದೇ ಇದ್ದರೂ ಶೂಟಿಂಗ್ ಅನ್ನು ಅರ್ಧದಲ್ಲಿಯೇ ನಿಲ್ಲಿಸಿ ಚಿತ್ರ ತಂಡ ತನ್ನ ಸಾಮಾನು ಸರಂಜಾಮುಗಳೊಂದಿಗೆ ಸ್ಥಳದಿಂದ ತೆರಳಬೇಕಾಯಿತು.

‘ಸುಲ್ತಾನ್' ಚಿತ್ರದ ನಿರ್ಮಾಪಕರಾದ ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ಈ ಕುರಿತಂತೆ ಹೇಳಿಕೆ ನೀಡಿ ತಮ್ಮ ಚಿತ್ರದ ಬಗ್ಗೆ ವಿವರಿಸಿ ಜತೆಗೆ ಒಂದು ಚಿತ್ರದ ಕಥಾವಸ್ತುವನ್ನು ಒಪ್ಪಲು ಸಾಧ್ಯವಿಲ್ಲವೆಂದ ಮಾತ್ರಕ್ಕೆ ಅದರ ಚಿತ್ರೀಕರಣಕ್ಕೆ ತಡೆಯೊಡ್ಡುವ ಕ್ರಮವನ್ನು ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News