ಎನ್‌ಆರ್‌ಸಿ: ಅಸ್ಸಾಮಿನ 33 ಜಿಲ್ಲೆಗಳಲ್ಲಿ 200 ವಿದೇಶಿಯರ ನ್ಯಾಯಾಧಿಕರಣಗಳ ಸ್ಥಾಪನೆ
Update: 2019-09-27 20:58 IST
ಗುವಾಹಟಿ,ಸೆ.27: ಅಂತಿಮ ಎನ್‌ಆರ್‌ಸಿ ಪಟ್ಟಿಯಲ್ಲಿ ಹೆಸರುಗಳಿಲ್ಲದವರ ಮೇಲ್ಮನವಿಗಳ ವಿಚಾರಣೆಗಾಗಿ ರಾಜ್ಯದ 33 ಜಿಲ್ಲೆಗಳಲ್ಲಿ ಇನ್ನೂ 200 ವಿದೇಶಿಯರ ನ್ಯಾಯಾಧಿಕರಣಗಳನ್ನು ಸ್ಥಾಪಿಸಲು ಅಸ್ಸಾಂ ಸರಕಾರವು ಸಜ್ಜಾಗಿದೆ. ರಾಜ್ಯದಲ್ಲಿ ಈಗಾಗಲೇ ಇಂತಹ 100 ನ್ಯಾಯಾಧಿಕರಣಗಳು ಕಾರ್ಯ ನಿರ್ವಹಿಸುತ್ತಿವೆ.
ಎನ್‌ಆರ್‌ಸಿಯಿಂದ ಹೊರಗಿರಿಸಲ್ಪಟ್ಟಿರುವವರು ಅಂತಿಮ ಪಟ್ಟಿ ಪ್ರಕಟಣೆಯ 120 ದಿನಗಳಲ್ಲಿ ಮೇಲ್ಮನವಿಗಳನ್ನು ಸಲ್ಲಿಸಬೇಕಿದೆ.
ಆ.31ರಂದು ಪ್ರಕಟಗೊಂಡ ಅಂತಿಮ ಎನ್‌ಆರ್‌ಸಿ ಪಟ್ಟಿಯಲ್ಲಿ ಒಟ್ಟು 3,30,27,661 ಅರ್ಜಿದಾರರ ಪೈಕಿ 3,11,22,004 ಜನರನ್ನು ಸೇರ್ಪಡೆಗೊಳಿಸಲಾಗಿದ್ದು,19,06,657 ಜನರ ಹೆಸರುಗಳನ್ನು ಕೈಬಿಡಲಾಗಿದೆ.