ವಿಐಪಿಗಳನ್ನು ಆಕರ್ಷಿಸಲು 24 ಕಾಲೇಜು ವಿದ್ಯಾರ್ಥಿನಿಯರ ಬಳಕೆ: ಸಿಟ್‌ಗೆ ಮಧ್ಯಪ್ರದೇಶದ ಹನಿಟ್ರ್ಯಾಪ್‌ನ ರೂವಾರಿ ಹೇಳಿಕೆ

Update: 2019-09-27 18:32 GMT

ಇಂದೋರ್, ಸೆ. 27: ಮಧ್ಯಪ್ರದೇಶ ಸರಕಾರದ ಉನ್ನತ ಹಾಗೂ ಪ್ರಬಲ ಸ್ಥಾನದಲ್ಲಿರುವವರನ್ನು ಆಕರ್ಷಿಸಲು ಕೆಳ ಮಧ್ಯಮ ವರ್ಗದ, ಕಾಲೇಜಿಗೆ ಹೋಗುತ್ತಿರುವ ಕನಿಷ್ಠ 24 ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳಲಾಗಿದೆ ಎಂದು ಮಧ್ಯಪ್ರದೇಶದಲ್ಲಿ ಪೊಲೀಸರು ಬೇಧಿಸಿದ ಹನಿಟ್ರ್ಯಾಪ್‌ನ ರೂವಾರಿ ಶ್ವೇತಾ ಜೈನ್ ವಿಶೇಷ ತನಿಖಾ ತಂಡ (ಸಿಟ್)ಕ್ಕೆ ತಿಳಿಸಿದ್ದಾಳೆ.

ವಿಐಪಿಗಳಿಂದ ನೂರಾರು ಕೋಟಿ ರೂಪಾಯಿಯ ಲಾಭದಾಯಕ ಸರಕಾರಿ ಗುತ್ತಿಗೆ ಪಡೆಯುವುದು ಈ ಹನಿಟ್ರ್ಯಾಪ್‌ನ ಮುಖ್ಯ ಉದ್ದೇಶ ಎಂದು ಶ್ವೇತಾ ಜೈನ್ ಹೇಳಿದ್ದಾಳೆ. ಹೆಚ್ಚಿನ ಗುತ್ತಿಗೆಯನ್ನು ಶ್ವೇತಾ ಜೈನ್ ಹಾಗೂ ಆಕೆಯ ಸಹವರ್ತಿ ಆರತಿ ದಯಾಳ್ ಕಮಿಷನ್ ಆಧಾರದಲ್ಲಿ ಪ್ರತಿಷ್ಠಿತ ಕಂಪೆನಿಗೆ ನೀಡಿದ್ದಾರೆ. ಗುತ್ತಿಗೆ ಪಡೆಯುವುದೂ ಅಲ್ಲದೆ, ಹಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನಿಯೋಜನೆ ಮಾಡುವುದು ಅವರ ಇನ್ನೊಂದು ಕೆಲಸ ಎಂಬುದು ವಿಶೇಷ ತನಿಖಾ ತಂಡದ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಅಧಿಕಾರಶಾಹಿಗಳ ಬೇಡಿಕೆಯಂತೆ ಹಲವು ಕಾಲೇಜು ಯುವತಿಯರಿಗೆ ಆಮಿಷ ಒಡ್ಡಲಾಗಿದೆ ಹಾಗೂ ಅವರ ತಂದೆಯ ಪ್ರಾಯದವರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಇಂದೋರ್‌ನಲ್ಲಿ ವಿಶೇಷ ತನಿಖಾ ತಂಡದ ವಿಚಾರಣೆ ವೇಳೆ ಶ್ವೇತಾ ಜೈನ್ ತಿಳಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News