ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್: ಪಾಕ್ ನಿರ್ಧಾರ

Update: 2019-09-30 16:41 GMT

ಹೊಸದಿಲ್ಲಿ,ಸೆ.30: ನವೆಂಬರ್‌ನಲ್ಲಿ ನಡೆಯಲಿರುವ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ ಕಾರ್ಯಕ್ರಮಕ್ಕೆ ಭಾರತದ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರನ್ನು ಆಹ್ವಾನಿಸಲು ನಿರ್ಧರಿಸಿರುವುದಾಗಿ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಮುಹಮ್ಮದ್ ಕುರೇಶಿ ಸೋಮವಾರ ತಿಳಿಸಿದ್ದಾರೆ ಎಂದು ಡಾನ್ ದಿನಪತ್ರಿಕೆ ವರದಿ ಮಾಡಿದೆ.

 ಕರ್ತಾರ್‌ಪುರ ಕಾರಿಡಾರ್ ಒಂದು ಪ್ರಮುಖ ಯೋಜನೆಯಾಗಿದೆ ಮತ್ತು ಪ್ರಧಾನಿ ಇಮ್ರಾನ್ ಖಾನ್ ಅದರ ಬಗ್ಗೆ ವಿಶೇಷ ಆಸಕ್ತಿವಹಿಸಿದ್ದಾರೆ. ಎಲ್ಲರೊಂದಿಗೆ ಸಮಾಲೋಚನೆ ನಡೆಸಿದ ನಂತರ ಭಾರತದ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಾವು ನಿರ್ಧರಿಸಿದ್ದೇವೆ. ಅವರನ್ನು ನಾವು ಬಹಳ ಗೌರವಿಸುತ್ತೇವೆ ಮತ್ತು ಕಾರ್ಯಕ್ರಮದಲ್ಲಿ ಅವರು ಸಿಖ್ ಸಮುದಾಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಕುರೇಶಿ ತಿಳಿಸಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಸಚಿವನಾಗಿರುವ ನಾನು ಸರಕಾರದ ಪರವಾಗಿ ಅವರನ್ನು ಕರ್ತಾರ್‌ಪುರ ಕಾರಿಡರ್ ಉದ್ಘಾಟನೆಗೆ ಆಹ್ವಾನಿಸುತ್ತೇನೆ. ಭಾರತದ ಮಾಜಿ ಪ್ರಧಾನಿಗೆ ಈ ಕುರಿತು ಲಿಖಿತ ಆಹ್ವಾನವನ್ನೂ ಕಳುಹಿಸಲಾಗುವುದು ಎಂದು ಕುರೇಶಿ ತಿಳಿಸಿದ್ದಾರೆ. ಬಾಬಾ ಗುರು ನಾನಕರ 550ನೇ ಜನ್ಮದಿನಾಚರಣೆಯಲ್ಲಿ ಭಾಗಿಯಾಗುವಂತೆ ಅವರು ಸಿಖ್ ಯಾತ್ರಾರ್ಥಿಗಳಿಗೆ ಆಹ್ವಾನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News