ಎಸ್‌ಸಿ/ಎಸ್‌ಟಿ ಕಾಯ್ದೆ ಕುರಿತು ಸುಪ್ರೀಂ ನಿರ್ಧಾರ ದಲಿತರ ಬದುಕಿನ ಕಹಿ ವಾಸ್ತವಗಳನ್ನು ಬಯಲಿಗಳೆದಿದೆ: ಮಾಯಾವತಿ

Update: 2019-10-02 14:54 GMT

 ಲಕ್ನೋ(ಉ.ಪ್ರ),ಅ.2: ಎಸ್‌ಟಿ/ಎಸ್‌ಟಿ ಕಾಯ್ದೆಯ ಕುರಿತು ಸರ್ವೋಚ್ಚ ನ್ಯಾಯಾಲಯದ ನಿರ್ಧಾರವು ದಲಿತರ ಬದುಕಿನ ಕಹಿ ವಾಸ್ತವಗಳನ್ನು ಮತ್ತು ಅವರ ಹೋರಾಟಗಳನ್ನು ಮುನ್ನೆಲೆಗೆ ತಂದಿದೆ ಹಾಗೂ ಆಡಳಿತ ಬಿಜೆಪಿ ಮತ್ತು ಕಾಂಗ್ರೆಸ್‌ನ ‘ದಲಿತ ಪ್ರೀತಿ ’ಯನ್ನು ಬಯಲಿಗೆಳೆದಿದೆ. ದೇಶ ಮತ್ತು ಸಮಾಜವು ಇದರ ಅರಿವನ್ನು ಹೊಂದಿರುವುದು ಅಗತ್ಯವಾಗಿದೆ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ಬುಧವಾರ ಟ್ವೀಟಿಸಿದ್ದಾರೆ.

  ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಬಂಧನದ ನಿಯಮಗಳನ್ನು ದುರ್ಬಲಗೊಳಿಸಿದ್ದ ತನ್ನ 2018,ಮಾ.20ರ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹಿಂದೆಗೆದುಕೊಂಡಿತ್ತು.

ನೀತಿ ಆಯೋಗದ ಶಾಲಾ ಶಿಕ್ಷಣ ರ್ಯಾಂಕಿಂಗ್‌ನಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ದೇಶದಲ್ಲಿಯೇ ಅತ್ಯಂತ ಕೆಳಗಿನ ಸ್ಥಾನಗಳಲ್ಲಿವೆ. ದೇಶ ಮತ್ತು ರಾಜ್ಯವನ್ನು ದೀರ್ಘ ಕಾಲ ಆಳಿರುವ ಪಕ್ಷಗಳು,ವಿಶೇಷವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಈ ರಾಜ್ಯಗಳಲ್ಲಿ ಇಂತಹ ಹೀನಾಯ ಸ್ಥಿತಿ ಏಕಿದೆ ಎಂದು ಗಾಂಧಿ ಜಯಂತಿಯ ದಿನದಂದು ಸಾರ್ವಜನಿಕರಿಗೆ ಉತ್ತರಿಸಲು ಸಾಧ್ಯವಾಗುವುದೇ ಎಂದು ಮಾಯಾವತಿ ಪ್ರತ್ಯೇಕ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News