ನಿರಂತರ ಕಣ್ಗಾವಲಿನಿಂದ ಸ್ವಾತಂತ್ರ್ಯಕ್ಕೆ ಅಪಾಯ : ಚಿದಂಬರಂ

Update: 2019-10-02 16:18 GMT

ಹೊಸದಿಲ್ಲಿ, ಅ.2: ಪ್ರಜಾಪ್ರಭುತ್ವ ವ್ಯವಸ್ಥೆ ಹಲವೆಡೆ ಕ್ಷೀಣಿಸುತ್ತಿದೆ. ವೆನೆಝುವೆಲ, ರಶ್ಯಾ, ಮ್ಯಾನ್ಮಾರ್, ಟರ್ಕಿ, ಹಂಗರಿ ಮತ್ತು ಈಗ ಅಮೆರಿಕದಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯ ರೆಕ್ಕಪುಕ್ಕ ಕತ್ತರಿಸಲಾಗುತ್ತಿದೆ. ಮುಂದೆ ಭಾರತದಲ್ಲಿ ಏನಾಗಬಹುದು ಎಂಬ ಕುತೂಹಲವಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಹೇಳಿದ್ದಾರೆ.

 ಸ್ವಾತಂತ್ರ ಎಂಬುದು ಎಂದಿಗೂ ಅಂತ್ಯಗೊಳ್ಳದ ಹೋರಾಟವಾಗಿದೆ .ನಿರಂತರ ಕಣ್ಗಾವಲಿನಿಂದ ಸ್ವಾತಂತ್ರಕ್ಕೆ ಅಪಾಯವಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ. ಐಎನ್‌ಎಕ್ಸ್ ಮೀಡಿಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ಪಿ ಚಿದಂಬರಂ ಅವರ ಟ್ವಿಟರ್ ಖಾತೆಯನ್ನು ಕುಟುಂಬದವರು ನಿರ್ವಹಿಸುತ್ತಿದ್ದಾರೆ.

20ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನೂರಾರು ದೇಶಗಳು ಹಾಗೂ ಮಿಲಿಯಾಂತರ ಜನರಲ್ಲಿ ಸ್ವಾತಂತ್ರ ಮತ್ತು ಸಮಾನತೆಯ ಭರವಸೆಯನ್ನು ಮೂಡಿಸಿತು. ಆದರೆ 21ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ದೇಶದಿಂದ ದೇಶಕ್ಕೆ ಕ್ಷೀಣಿಸುತ್ತಾ ಬರುತ್ತಿದೆ. ಭಾರತಕ್ಕೆ ಮುಂದೇನು ಕಾದಿದೆಯೋ ಎಂಬ ಪ್ರಶ್ನೆ ಮೂಡುತ್ತಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News