ಹರ್ಯಾಣ: ಟಿಕ್‌ಟಾಕ್ ಸ್ಟಾರ್ ಬಿಜೆಪಿ ಅಭ್ಯರ್ಥಿ

Update: 2019-10-03 15:02 GMT

ಚಂಢಿಗಡ, ಅ. 3: ಹರ್ಯಾಣದ 90 ವಿಧಾನ ಸಭಾ ಸ್ಥಾನಗಳಲ್ಲಿ 75 ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಿರುವ ಬಿಜೆಪಿ ಆದಂಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಲದೀಪ್ ಬಿಷ್ಣೋಯಿ ವಿರುದ್ಧ ಟಿಕ್‌ಟಾಕ್ ಸ್ಟಾರ್ ಹಾಗೂ ಟಿವಿ ನಟಿ ಸೋನಾಲಿ ಫೋಗಟ್ ಅವರನ್ನು ಕಣಕ್ಕಿಳಿಸಿದೆ.

ಕಳೆದೆ ಚುನಾವಣೆಯಲ್ಲಿ ಕುಲದೀಪ್ ಬಿಷ್ಣೋಯಿ ಶೇ. 47.1, ಐಎನ್‌ಎಲ್‌ಡಿಯ ಕುಲವೀರ್ ಸಿಂಗ್ ಶೇ. 32.78, ಕಾಂಗ್ರೆಸ್‌ನ ಸತೀಂದರ್ ಸಿಂಗ್ ಶೇ. 8.47, ಬಿಜೆಪಿಯ ಕರಣ್ ಸಿಂಗ್ ಶೇ.ಯ 6.9 ಮತಗಳನ್ನು ಪಡೆದಿದ್ದರು. 2014ರಲ್ಲಿ ಕುಲದೀಪ್ ಬಿಷ್ಣೋಯಿ ಹರ್ಯಾಣ ಜನಹಿತ್ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2016ರಲ್ಲಿ ಈ ಪಕ್ಷ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿತ್ತು.

ಸೋನಾಲಿ ಸಿಂಗ್ ಫೋಗಟ್ ಫತೇಹಾಬಾದ್ ಜಿಲ್ಲೆಯ ಭೂತಾನ್ ಗ್ರಾಮದವರು. ಇವರು ಹಿಸ್ಸಾರ್ ಹರಿತಾದ ಸಂಜಯ್ ಫೋಗಟ್ ಅವರನ್ನು ವಿವಾಹವಾಗಿದ್ದರು. ಆದರೆ, ಸಂಜಯ್ ಫೋಗಟ್ 2016 ಡಿಸೆಂಬರ್‌ನಲ್ಲಿ ಹೊಲದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News