ಅಯೋಧ್ಯೆ ವಿಚಾರಣೆ: ಮಧ್ಯಸ್ಥಿಕೆ ವಿವರ ಟ್ವಿಟ್ಟರ್‌ನಲ್ಲಿ ಸೋರಿಕೆ; ಮುಸ್ಲಿಂ ಕಕ್ಷಿಗಾರರ ಪರ ವಕೀಲ ಪ್ರತಿಪಾದನೆ

Update: 2019-10-04 16:55 GMT

ಹೊಸದಿಲ್ಲಿ, ಅ. 4: ಅಯೋಧ್ಯೆ ವಿವಾದದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ 37ನೇ ದಿನಕ್ಕೆ ಮುಂದುವರಿದಿದೆ. ಈ ನಡುವೆ ಮಧ್ಯಸಿಕೆ ಪ್ರಕ್ರಿಯೆಯ ವಿವರಗಳು ಸೋರಿಕೆಯಾಗಿವೆ ಹಾಗೂ ಅದನ್ನು ರಹಸ್ಯವಾಗಿ ಇರಿಸಿಲ್ಲ ಎಂದು ಮುಸ್ಲಿಂ ಕಕ್ಷಿಗಾರರು ಪ್ರತಿಪಾದಿಸಿದ್ದಾರೆ. ಅಯೋಧ್ಯೆ ಭೂ ವಿವಾದದಲ್ಲಿ ಮುಸ್ಲಿಂ ಪಾಲುದಾರರನ್ನು ಪ್ರತಿನಿಧಿಸಿದ ನ್ಯಾಯವಾದಿ ರಾಜೀವ್ ಧವನ್, ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಚರ್ಚಿಸಲಾದ ಕೆಲವು ವಿಷಯಗಳನ್ನು ರಹಸ್ಯವಾಗಿ ಇರಿಸಿಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸಿದರು.

ಪುರಾವೆಗಳು ಹಾಗೂ ಅಭಿಪ್ರಾಯಗಳು ಟ್ವಿಟರ್‌ನಲ್ಲಿ ಸೋರಿಕೆಯಾಗಿವೆ ಎಂದು ವಿಚಾರಣೆ ಸಂದರ್ಭ ಅವರು ತಿಳಿಸಿದರು. ಈ ನಡುವೆ, ಅಯೋಧ್ಯೆಯ ವಿಚಾರಣೆ ಅಕ್ಟೋಬರ್ 18ರ ಒಳಗೆ ಪೂರ್ಣಗೊಳಿಸಬೇಕು ಎಂದು ಗಡು ವಿಧಿಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ಶನಿವಾರ (ಅಕ್ಟೋಬರ್ 5) ಈ ಪ್ರಕರಣವನ್ನು ಸಾಂವಿಧಾನಿಕ ಪೀಠ ವಿಚಾರಣೆ ನಡೆಸದು ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News