ಚಂದ್ರಯಾನ-2ರ ಆರ್ಬಿಟರ್ ಪೇಲೋಡ್‌ನಿಂದ ಚಂದ್ರನ ಮೇಲ್ಮೈನಲ್ಲಿಯ ಚಾರ್ಜ್ ಹೊಂದಿದ ಕಣ ಪತ್ತೆ

Update: 2019-10-04 17:31 GMT

ಹೊಸದಿಲ್ಲಿ, ಅ. 4: ಚಂದ್ರಯಾನ 2ರ ಆರ್ಬಿಟರ್ ಪೇಲೋಡ್ ‘ಕ್ಲಾಸ್’ ತನ್ನ ಮೊದಲ ಕೆಲವು ದಿನಗಳ ಅವಲೋಕನದಲ್ಲಿ ಚಾರ್ಜ್ ಹೊಂದಿದ ಕಣಗಳು ಹಾಗೂ ಅದರ ತೀವ್ರತೆಯ ವ್ಯತ್ಯಯವನ್ನು ಪತ್ತೆ ಹಚ್ಚಿದೆ ಎಂದು ಇಸ್ರೊ ಗುರುವಾರ ಹೇಳಿದೆ.

ಜಿಯೋಟೈಲ್ ಉಪಗ್ರಹದ ಸಮೀಪ ಸೆಪ್ಟಂಬರ್‌ನಲ್ಲಿ ಮೊದಲ ಬಾರಿಗೆ ಹಾದು ಹೋಗುವ ಸಂದರ್ಭ ಚಂದ್ರಯಾನ-2ನ ಆರ್ಬಿಟರ್ ಪೇಲೋಡ್ ‘ಕ್ಲಾಸ್’ ತನ್ನ ಮೊದಲ ಕೆಲವು ದಿನಗಳ ಅವಲೋಕನದಲ್ಲಿ ಚಾರ್ಜ್ ಹೊಂದಿದ ಕಣಗಳು ಹಾಗೂ ಅದರ ತೀವ್ರತೆಯ ವ್ಯತ್ಯಾಸವನ್ನು ಗುರುತಿಸಿದೆ ಎಂದು ಇಸ್ರೋ ಟ್ವೀಟ್‌ನಲ್ಲಿ ಹೇಳಿದೆ. ಚಂದ್ರನ ನೆಲದಲ್ಲಿ ಮೂಲಧಾತುಗಳನ್ನು ನೇರವಾಗಿ ಪತ್ತೆ ಮಾಡಲು ಚಂದ್ರಯಾನ-2ರ ಆರ್ಬಿಟರ್ ಪೇಲೋಡ್ ‘ಕ್ಲಾಸ್’ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಇಸ್ರೋ ಹೇಳಿಕೆ ತಿಳಿಸಿದೆ. ಸೂರ್ಯನ ಮೇಲಿನ ಸೌರ ಜ್ವಾಲೆಯು ಚಂದ್ರನ ಮೇಲ್ಮೈ ಅತಿಯಾಗಿ ಬಿದ್ದಾಗ ಅದು ಪ್ರತಿಫಲಿತಗೊಳ್ಳುವ ಸಂದರ್ಭದಲ್ಲಿ ಇಂತಹ ಮೂಲಧಾತುಗಳ ಇರುವಿಕೆಯನ್ನು ಸ್ವಷ್ಟವಾಗಿ ಗಮನಿಸಬಹುದಾಗಿದೆ ಎಂದು ಇಸ್ರೋ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News